ನವೀನ ಸೇವಾ ಬ್ಯಾಂಕಿಂಗ್ (Innovative Service Banking)

  • ಸೇವಾ ಬ್ಯಾಂಕಿಂಗ್ ಎನ್ನುವುದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಬ್ಯಾಂಕ್ ನ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸಿ ಆ ಮೂಲಕ ಗ್ರಾಹಕರ ಬ್ಯಾಂಕಿಂಗ್ ಅನುಭವಕ್ಕೆ ಹೊಸ ಆಯಾಮ ನೀಡಿ ಮರು ವ್ಯಾಖ್ಯಾನಿಸುವ ಪರಿಕಲ್ಪನೆಯಾಗಿದೆ. ಕದಂಬದಲ್ಲಿ, ಸೇವಾ ಬ್ಯಾಂಕಿಂಗ್ ಎಂಬುದನ್ನು ಸಾಂಪ್ರದಾಯಿಕ ನೆಲೆಯಲ್ಲಿ ಸಾಮಾನ್ಯವಾಗಿ ಒದಗಿಸುವ ಆರ್ಥಿಕ ಸೇವೆಗಳನ್ನೆಲ್ಲಾ ಮೀರಿದ ಒಂದು ಸಮಗ್ರ ಪರಿಕಲ್ಪನೆಯಾಗಿ ಅಳವಡಿಸಿಕೊಂಡಿದ್ದೇವೆ. ಇದು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಒಂದೇ ಕಡೆಯಲ್ಲಿ ಬಹುವಿಧವಾದ ಸೇವೆಗಳ ಗುಚ್ಛವನ್ನು ಒದಗಿಸುವ ಮೂಲಕ, ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಹೆಚ್ಚು ಅನುಕೂಲಕರವಾಗುವಂತೆ, ಸುಲಭವಾಗಿ ಲಭ್ಯವಾಗುವಂತೆ ಮತ್ತು ಬಹಳ ಪರಿಣಾಮಕಾರಿಯಾಗುವಂತೆ ಮಾಡುತ್ತದೆ.
  • ಕದಂಬದಲ್ಲಿ ಸೇವಾ ಬ್ಯಾಂಕಿಂಗ್‌ನ ಪ್ರಮುಖ ಅಂಶಗಳು:
  • ಸಂಯೋಜಿತ ಡಿಜಿಟಲ್ ಚಾನೆಲ್‌ಗಳು: ನಾವು ತಂತ್ರಜ್ಞಾನವನ್ನು ಉಪಯೋಗಿಸಿ ಸಂಸ್ಥೆಯ ಚೌಕಟ್ಟನ್ನೇ ಮೀರುವ ನಿರಂತರ ಡಿಜಿಟಲ್ ವೇದಿಕೆಗಳನ್ನು ನಿರ್ಮಿಸಿದ್ದೇವೆ. ಇದರ ಮೂಲಕ ಗ್ರಾಹಕರು ತಮ್ಮ ತಮ್ಮ ಮನೆಯಲ್ಲಿರುವಾಗಲೂ ಅಥವಾ ಪ್ರಯಾಣದಲ್ಲಿರುವಾಗಲೂ ವಿವಿಧ ಬ್ಯಾಂಕಿಂಗ್ ಹಾಗೂ ಬ್ಯಾಂಕಿಂಗೇತರ ಸೇವೆಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ.
  • ನವೀನ ತಂತ್ರಜ್ಞಾನಗಳ ಅಳವಡಿಕೆ: : ಗ್ರಾಹಕರಿಗೆ ಸೇವೆಗಳ ಒದಗಿಸುವಿಕೆಯನ್ನು ಸುಧಾರಿಸಲಿಕ್ಕಾಗಿ ಕೃತಕ ಬುದ್ಧಿಮತ್ತೆ (AI), ಯಂತ್ರ ಅಧ್ಯಯನ (Machine Learning), ಬ್ಲಾಕ್‌ಚೈನ್ ಹಾಗೂ ಓಪನ್ ಬ್ಯಾಂಕಿಂಗ್ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ನಿರಂತರವಾಗಿ ಹೊಸ ಅನ್ವೇಷಣೆಗಳನ್ನು ಅಳವಡಿಸಿಕೊಳ್ಳುತ್ತಿರುತ್ತೇವೆ. ಈ ತಂತ್ರಜ್ಞಾನಗಳು ವ್ಯಕ್ತಿಗತ ನೆಲೆಯ ಆರ್ಥಿಕ ಪರಿಹಾರಗಳು, ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ವಿಶ್ಲೇಷಣಾತ್ಮಕ ಮುನ್ನೋಟ ಒದಗಿಸುತ್ತವೆ, ವ್ಯವಹಾರಗಳಲ್ಲಿ ಸುರಕ್ಷತೆ ಹಾಗೂ ಪ್ರಕ್ರಿಯೆಗಳಲ್ಲಿ ಸರಳತೆಯನ್ನು ಸಾಧ್ಯವಾಗಿಸುತ್ತವೆ.
  • ಸಮಗ್ರ ಸೇವೆಗಳ ಒದಗಿಸುವಿಕೆ : ಸಾಂಪ್ರದಾಯಿಕ ನೆಲೆ ಸಾಮಾನ್ಯ ಬ್ಯಾಂಕಿಂಗ್ ಸೇವೆಗಳನ್ನಷ್ಟೇ ಅಲ್ಲದೆ, ಕದಂಬದ ಸೇವಾ ಬ್ಯಾಂಕಿಂಗ್ ಮಾದರಿ ಕೆಳಕಂಡ ಇತರ ಸೇವೆಗಳನ್ನು ಒಳಗೊಂಡಿದೆ:
    • ಸಾಲಗಳು, ಹೂಡಿಕೆಗಳು ಹಾಗೂ ವಿಮೆ ಸೇರಿದಂತೆ ಇತರ ಹಣಕಾಸು ಸೇವೆಗಳು
    • ಸಾಮಾನ್ಯ ಆರ್ಥಿಕ ಸೇವಗಳಿಗೆ ಹೊರತಾದ ಇತರ ಉಪಯುಕ್ತ ಪಾವತಿ ಸೇವೆಗಳು, ಪ್ರವಾಸ ಟಿಕೆಟ್ ಕಾಯ್ದಿರಿಸುವಿಕೆ, ಇ-ಕಾಮರ್ಸ್ ಸಹಭಾಗಿತ್ವಗಳು ಸೇರಿದಂತೆ ಬ್ಯಾಂಕಿಂಗೇತರ ಸೇವೆಗಳು
    • ವೈಯಕ್ತಿಕ ಹಾಗೂ ವ್ಯಾವಹಾರಿಕವಾದ ಅಗತ್ಯಗಳಿಗೆ ಸರಿಹೊಂದುವ ವಿಶೇಷ ಸಲಹಾ ಸೇವೆಗಳು
  • ಗ್ರಾಹಕ ಕೇಂದ್ರಿತ ದೃಷ್ಟಿಕೋನ: ಬದಲಾಗುತ್ತಿರುವ ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಂಡು ಸೇವೆಗಳಲ್ಲಿ ಚುರುಕುತನ ಮತ್ತು ಕ್ರಿಯಾಶೀಲ ಪಾಲ್ಗೊಳ್ಳುವಿಕೆ ಮೂಲಕ ಅವುಗಳನ್ನು ಒದಗಿಸುವುದು ನಮ್ಮ ಆದ್ಯತೆ. ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ಸಂಕೀರ್ಣ ಪ್ರಕ್ರಿಯೆಗಳನ್ನು ಸರಳಗೊಳಿಸಿ, ಒಟ್ಟಾರೆ ಬ್ಯಾಂಕಿಂಗ್ ಅನುಭವವನ್ನು ಮತ್ತಷ್ಟು ವೃದ್ಧಿಸುವುದು ನಮ್ಮ ಉದ್ದೇಶವಾಗಿದೆ.
  • ನಿರಂತರ ವಿಕಸನ : ಸೇವಾ ಬ್ಯಾಂಕಿಂಗ್ ಎಂಬುದು ಒಂದು ಕ್ರಿಯಾಶೀಲವಾದ ವ್ಯವಸ್ಥೆಯಾಗಿದ್ದು, ತಂತ್ರಜ್ಞಾನಗಳಲ್ಲಾಗುವ ಪ್ರಗತಿ ಹಾಗೂ ಗ್ರಾಹಕರ ಆಯ್ಕೆ ಆದ್ಯತೆಗಳ ಜೊತೆಗೆ ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ. ಕದಂಬದಲ್ಲಿ ನಾವು ಉದ್ಯಮದಲ್ಲಾಗುವ ಹೊಸ ಬದಲಾವಣೆಗಳಿಗೆ ಮತ್ತು ಪ್ರವೃತ್ತಿಗಳಿಗೆ ತಕ್ಷಣ ಹೊಂದಿಕೊಳ್ಳುತ್ತಾ, ಹೊಸ ಸೇವೆಗಳನ್ನು ಸೇರಿಸಿಕೊಳ್ಳುವ ಮೂಲಕ ಸದಾ ಮುಂಚೂಣಿಯಲ್ಲಿ ಇರುವುದಕ್ಕೆ ಬದ್ಧರಾಗಿದ್ದೇವೆ.
  • ಸೇವಾ ಬ್ಯಾಂಕಿಂಗ್ ಅನ್ನು ಅಳವಡಿಸಿಕೊಳ್ಳುವ ಮೂಲಕ, ಕದಂಬವು ಬ್ಯಾಂಕಿಂಗ್ ಅನ್ನು ಒಂದು ಸಮಗ್ರ ಪರಿಸರ ವ್ಯವಸ್ಥೆಯಾಗಿ ಮರು ವ್ಯಾಖ್ಯಾನ ಮಾಡುತ್ತದೆ. ಇಲ್ಲಿ ಗ್ರಾಹಕರು ಆರ್ಥಿಕ ಸೇವೆಗಳ ಜೊತೆಗೆ ಇತರ ಸಂಬಂಧಿತ ಸೇವೆಗಳನ್ನು ನಿರಾತಂಕವಾಗಿ ಒಂದೇ ಕಡೆಯಲ್ಲಿ ಪಡೆಯಬಹುದು. ನಾವೀನ್ಯತೆ ಮತ್ತು ಅನುಕೂಲತೆ ಒಂದೇ ಕಡೆ ಸಂಗಮವಾಗುವ ಭವಿಷ್ಯ ಕಾಲದ ಬ್ಯಾಂಕಿಂಗ್ ಅನುಭವಕ್ಕೆ ನಮ್ಮೊಂದಿಗೆ ಸೇರಿ.
  • ಒಂದೇ ಏಕೀಕೃತ ಛಾವಣಿಯಡಿಯಲ್ಲಿ ಆಧುನಿಕತೆ ಮತ್ತು ಸೌಕರ್ಯಗಳೆರಡೂ ಒಂದಾಗುವ ಕದಂಬದ ಸೇವಾ ಬ್ಯಾಂಕಿಂಗ್ ನ ಶ್ರೇಷ್ಠತೆಯನ್ನು ಅನುಭವಿಸಿ.
kadamba logo