ಕದಂಬ ಮೊಬೈಲ್ ಅಪ್ಲಿಕೇಶನ್ (Kadamba Mobile Application)

  • ಕದಂಬವು ಹೊಸತಲೆಮಾರಿನ ಸಹಕಾರಿ ಸಂಸ್ಥೆಯಾಗಿದ್ದು, ತನ್ನ ಗೌರವಾನ್ವಿತ ಸದಸ್ಯರಿಗೆ ಉತ್ತಮ ರೀತಿಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ನಿರಂತರವಾಗಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಾ ಬರುತ್ತಿದೆ. ಈ ನಿಟ್ಟಿನಲ್ಲಿ, ಕದಂಬವು ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಅನ್ನು ಪರಿಚಯಿಸಿರುವ ಮೊದಲ ಸಹಕಾರಿ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ನಾವು ಹೊಂದಿದ್ದೇವೆ. ಈ ಅಪ್ಲಿಕೇಶನ್‌ನ್ನು ಸರಳ, ಬಳಕೆದಾರ ಸ್ನೇಹಿ ಹಾಗೂ ಕ್ರಿಯಾಶೀಲ ಬ್ಯಾಂಕಿಂಗ್ ಅನುಭವವನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಕದಂಬ ಮೊಬೈಲ್ ಅಪ್ಲಿಕೇಶನ್ – ಪ್ರಮುಖ ಸೇವೆಗಳು

  • ಈ ಹೊಸರೀತಿಯ ಆಧುನಿಕ ಮೊಬೈಲ್ ಅಪ್ಲಿಕೇಶನ್, ಸದಸ್ಯರ ದೈನಂದಿನ ಹಣಕಾಸಿನ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಕೆಳಕಂಡ ಸಮಗ್ರ ಸೇವೆಗಳನ್ನು ಒದಗಿಸುತ್ತದೆ:
  • ಸರಳ ಖಾತೆ ನಿರ್ವಹಣೆ (Easy Account Management): ಸದಸ್ಯರಿಗೆ ತಮ್ಮ ಖಾತೆಯ ವಿವರಗಳನ್ನು ವೀಕ್ಷಿಸಲು, ವ್ಯವಹಾರಗಳ ವಿವರಗಳನ್ನು ಪರಿಶೀಲಿಸಲು ಹಾಗೂ ತಮ್ಮ ಖಾತೆಯಲ್ಲಿನ ಶಿಲ್ಕನ್ನು ಸುಲಭವಾಗಿ ತಿಳಿದುಕೊಳ್ಳಲು ಅವಕಾಶ.
  • ಸುಗಮ ಮತ್ತು ಸುರಕ್ಷಿತ ವ್ಯವಹಾರಗಳು (Seamless Transactions): ಹಣದ ವರ್ಗಾವಣೆ, ಬಿಲ್ ಪಾವತಿ ಹಾಗೂ ಮೊಬೈಲ್ ರೀಚಾರ್ಜ್‌ಗಳನ್ನು ಕೆಲವೇ ಕ್ಲಿಕ್ಕುಗಳಲ್ಲಿ ವೇಗವಾಗಿ ಮತ್ತು ಸುರಕ್ಷಿತವಾಗಿ ನಿರ್ವಹಿಸಬಹುದು.
  • ಸಾಲ ಸೇವೆಗಳು (Loan Services): ಮೊಬೈಲ್ ಅಪ್ಲಿಕೇಶನ್ ಮುಖಾಂತರ ನೇರವಾಗಿ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹಾಗೂ ಸಾಲದ ಅರ್ಜಿಯ ಸ್ಥಿತಿಯನ್ನು ಹಂತ ಹಂತವಾಗಿ ಗಮನಿಸುವ ಸೌಲಭ್ಯ, ಇದರಿಂದ ಸಾಲ ಪಡೆಯುವ ಪ್ರಕ್ರಿಯೆ ತುಂಬಾ ಸರಳ ಮತ್ತು ಪಾರದರ್ಶಕವಾಗುತ್ತದೆ.
  • ವ್ಯಕ್ತಿಗತವಾದ ಎಚ್ಚರಿಕೆ ಸೂಚನೆಗಳು (Customized Alerts): ಖಾತೆಯಲ್ಲಿ ನಡೆಯುವ ಎಲ್ಲಾ ವ್ಯವಹಾರಗಳಿಗೆ ತಕ್ಷಣದ ಸೂಚನೆಗಳು ಮತ್ತು ಎಚ್ಚರಿಕೆಗಳನ್ನು ಸ್ವೀಕರಿಸುವ ಮೂಲಕ, ಸದಸ್ಯರು ತಮ್ಮ ಹಣಕಾಸು ಚಟುವಟಿಕೆಗಳ ಕುರಿತು ಸದಾ ಮಾಹಿತಿ ಹೊಂದಿರಬಹುದು.
  • ಸುಧಾರಿತ ಸುರಕ್ಷತೆ (Enhanced Security): ಬಯೋಮೆಟ್ರಿಕ್ ದೃಢೀಕರಣ, ಡೇಟಾ ಎನ್‌ಕ್ರಿಪ್ಷನ್ ಸೇರಿದಂತೆ ಅತ್ಯುಚ್ಚ ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಿಕೊಂಡಿದ್ದು, ಸದಸ್ಯರ ಹಣಕಾಸು ಮಾಹಿತಿಯ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸುತ್ತದೆ.
  • ಒಂದೇ ವೇದಿಕೆಯಲ್ಲಿ ಬಹು ವಿಧದ ಸೇವೆಗಳು: ವಿವಿಧ ಬ್ಯಾಂಕಿಂಗ್ ಸೇವೆಗಳನ್ನು ಒಂದೇ ಏಕೀಕೃತ ಡಿಜಿಟಲ್ ವೇದಿಕೆಯಲ್ಲಿ ಲಭ್ಯವಾಗುವಂತೆ ರೂಪುಗೊಳಿಸಲಾಗಿದೆ, ಇದರಿಂದ ಗ್ರಾಹಕರಿಗೆ ಗರಿಷ್ಠ ಅನುಕೂಲತೆ ಸಿಗುತ್ತದೆ.
  • ಚಿನ್ನದ ವ್ಯಾಪಾರ (Gold Trading): ಮೊಬೈಲ್ ಅಪ್ಲಿಕೇಶನ್ ಮುಖಾಂತರ ನೇರವಾಗಿ ಚಿನ್ನ ವ್ಯಾಪಾರದಲ್ಲಿ ಭಾಗವಹಿಸುವ ಅವಕಾಶವನ್ನು ಒದಗಿಸಲಾಗಿದೆ ಮತ್ತು ಇದು ಸದಸ್ಯರಿಗೆ ತಮ್ಮ ಹಣವನ್ನು ನೇರವಾಗಿ ಬಂಗಾರದ ಮೇಲೆ ಹೂಡಿಕೆ ಮಾಡಲು ಅವಕಾಶ ನೀಡುತ್ತದೆ.

ಕದಂಬದ ವಿಶಿಷ್ಟ ದೃಷ್ಟಿಕೋನ

  • ಹೊಸ ಅವಿಷ್ಕಾರಗಳ ಅಳವಡಿಕೆ ಹಾಗೂ ನಮ್ಮ ಸದಸ್ಯರನ್ನೇ ಕೇಂದ್ರವಾಗಿಟ್ಟುಕೊಂಡು ಅವರಿಗೆ ಉಪಯುಕ್ತವಾಗುವಂಥ ಪರಿಹಾರಗಳನ್ನು ಒದಗಿಸಲು ಕದಂಬ ಸದಾ ಬದ್ಧವಾಗಿದೆ. ಕದಂಬ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ನಮ್ಮ ಈ ಬದ್ಧತೆಯ ಪ್ರತೀಕವಾಗಿದೆ.
  • ಬಳಕೆದಾರ ಕೇಂದ್ರಿತ ವಿನ್ಯಾಸ (User-Centric Design): ಸದಸ್ಯರ ಅವಶ್ಯಕತೆ ಅಗತ್ಯಗಳಿಗೆ ಅನುಸಾರವಾಗಿ ರೂಪುಗೊಂಡಿರುವ ಈ ಅಪ್ಲಿಕೇಶನ್, ಸರಳ ಹಾಗೂ ಸುಲಭವಾಗಿ ಉಪಯೋಗಿಸಬಹುದು. ನಮ್ಮ ಮೊಬೈಲ್ ಅಪ್ಲಿಕೇಶನ್ ನಮ್ಮ ಬಳಕೆದಾರ ಕೇಂದ್ರಿತ ವಿಧಾನಕ್ಕೆ ಒಂದು ಉತ್ತಮ ನಿದರ್ಶನವಾಗಿದೆ.
  • ಸಮಗ್ರ ಸೇವೆಗಳ ಕೊಡುಗೆ (Comprehensive Service Offering): ಸಾಂಪ್ರದಾಯಿಕವಾದ ಬ್ಯಾಂಕಿಂಗ್ ಸೇವೆಗಳನ್ನು ಹೊರತುಪಡಿಸಿ ನಮ್ಮ ಮೊಬೈಲ್ ಆಪ್ ಚಿನ್ನದ ಖರೀದಿ ಮುಂತಾದ ವಿಶೇಷ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಒಂದೇ ಕಡೆಯಲ್ಲಿ ಎಲ್ಲಾ ವಿಧದ ಆರ್ಥಿಕ ಅಗತ್ಯಗಳಿಗೆ ಪರಿಹಾರ ಒದಗುತ್ತದೆ.
  • ಸದಸ್ಯರ ವ್ಯಕ್ತಿಗತ ಅನುಭವ (Personalized Member Experience): ನೈಜ ಸಮಯದಲ್ಲಿ ದೊರಕುವ ಸೂಚನೆಗಳು ಮತ್ತು ಖಾತೆಯಲ್ಲಿನ ವ್ಯವಹಾರಗಳ ಬಗ್ಗೆ ವ್ಯಕ್ತಿಗತ ನೆಲೆಯಲ್ಲಿ ದೊರಕುವ ಎಚ್ಚರಿಕೆ ಸೂಚನೆಗಳ ಮೂಲಕ, ಸದಸ್ಯರಿಗೆ ಅವರ ಖಾತೆಯಲ್ಲಿನ ಆರ್ಥಿಕ ವಹಿವಾಟುಗಳ ಬಗ್ಗೆ ಸದಾ ಮಾಹಿತಿ ಇರುತ್ತದೆ.
  • ಸಮುದಾಯ ಕೇಂದ್ರಿತ ದೃಷ್ಟಿ (Community Focus): ಒಂದು ಸಹಕಾರಿ ಸಂಸ್ಥೆಯಾಗಿ, ನಮ್ಮ ಅಪ್ಲಿಕೇಶನ್ ಸದಸ್ಯರ ವಿಶೇಷ ಅಗತ್ಯಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲ್ಪಟ್ಟಿದ್ದು, ಅವರ ಆರ್ಥಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ ಮತ್ತು ಆರ್ಥಿಕ ಸೌಲಭ್ಯಗಳು ಲಭ್ಯವಾಗುವಂತೆ ಮಾಡುತ್ತದೆ.
  • ನಿರಂತರ ಸುಧಾರಣೆ (Continuous Improvement): ಸದಸ್ಯರ ಪ್ರತಿಕ್ರಿಯೆ, ಅಭಿಪ್ರಾಯ ಹಾಗೂ ತಾಂತ್ರಿಕ ಕ್ಷೇತ್ರದಲ್ಲಾಗುತ್ತಿರುವ ಪ್ರಗತಿಯನ್ನು ಆಧರಿಸಿ, ಕದಂಬ ತನ್ನ ಅಪ್ಲಿಕೇಶನ್‌ನ ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆಯನ್ನು ನಿರಂತರವಾಗಿ ವೃದ್ಧಿಸುವತ್ತ ಬದ್ಧವಾಗಿದೆ.
  • ಈ ಎಲ್ಲಾ ಅವಶ್ಯಕ ಸೇವೆಗಳನ್ನು ಒಂದೇ ಸರಳ ಮತ್ತು ಬಳಕೆದಾರ ಸ್ನೇಹಿ ವೇದಿಕೆಯಲ್ಲಿ ಒಂದುಗೂಡಿಸುವ ಮೂಲಕ, ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲೇ ಕದಂಬ ಒಂದು ಹೊಸ ಮಾನದಂಡವನ್ನು ಸ್ಥಾಪಿಸಿದೆ. ನಮ್ಮ ಸದಸ್ಯರು ತಮ್ಮ ಹಣಕಾಸು ನಿರ್ವಹಣೆಯನ್ನು ಸುಗಮವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸಲು ಅಗತ್ಯವಾದ ಎಲ್ಲಾ ಉಪಕರಣಗಳನ್ನು ಒದಗಿಸುವ ಮೂಲಕ, ಅವರ ಆರ್ಥಿಕ ಗುರಿಗಳನ್ನು ಸುಲಭವಾಗಿ ಸಾಧಿಸಲು ಕದಂಬ ಶಕ್ತಿ ತುಂಬುವ ಕೆಲಸ ಮಾಡುತ್ತದೆ.
kadamba logo