Image

ಶ್ರೀ ಅನಂತಕುಮಾರ್ ಹೆಗಡೆ

ಮಾಜಿ ಸಂಸತ್ ಸದಸ್ಯರು

ಮಾಜಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರು
ಭಾರತ ಸರ್ಕಾರ

ಕದಂಬ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರು

ಶ್ರೀ ಅನಂತಕುಮಾರ್ ಹೆಗಡೆ ಅವರೊಬ್ಬ ದೂರದೃಷ್ಟಿಯುಳ್ಳ ನಾಯಕ ಮತ್ತು ಕ್ರಿಯಾಶೀಲ ಉದ್ಯಮಿಯಾಗಿದ್ದು, ಕಳೆದ ಎರಡು ದಶಕಗಳಿಂದ ಭಾರತೀಯ ರಾಜಕೀಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿರುವವರು. 1996ರಿಂದ ಉತ್ತರ ಕನ್ನಡ ಕ್ಷೇತ್ರ ದಿಂದ ಯಾವುದೇ ಕೌಟುಂಬಿಕ ರಾಜಕೀಯ ಹಿನ್ನೆಲೆ ಅಥವಾ ಹೆಚ್ಚಿನ ಆರ್ಥಿಕ ಬೆಂಬಲವಿಲ್ಲದೆ ನಿರಂತರವಾಗಿ ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿ ಉತ್ತರಕನ್ನಡ ಜನರನ್ನು ಪ್ರತಿನಿಧಿಸಿದ್ದಾರೆ. ಅವರು ತಮ್ಮ ಸುಧೀರ್ಘ ಸೇವಾವಧಿಯಲ್ಲಿ ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದು, 16ಕ್ಕಿಂತ ಹೆಚ್ಚು ಸಂಸತ್ ಸಮಿತಿಗಳ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ವಿಜ್ಞಾನ ಮತ್ತು ಹೊಸ ಆವಿಷ್ಕಾರಗಳ ಬಗ್ಗೆ ಆಸಕ್ತಿ ಹೊಂದಿರುವ ಅವರು ಕಲಾ ಪದವೀಧರರಾಗಿದ್ದು, ಕದಂಬ ಸಂಸ್ಥೆಯ ಮೂಲಕ ಗ್ರಾಮೀಣ ಭಾರತದಲ್ಲಿ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ವೃತ್ತಿಪರ ಹಿನ್ನೆಲೆ

  • ರಾಜಕೀಯ ಸೇವೆ: ಸ್ವಲ್ಪವೂ ರಾಜಿಯಾಗದ ಸೈದ್ಧಾಂತಿಕ ಬದ್ಧತೆಗೆ ಹೆಸರುವಾಸಿಯಾಗಿರುವ ಶ್ರೀ ಅನಂತಕುಮಾರ್ ಹೆಗಡೆ ಅವರು ಓರ್ವ ನೀತಿ ನಿರೂಪಕನಾಗಿಯೂ ಗಣನೀಯವಾದ ಕೊಡುಗೆ ನೀಡಿದ್ದಲ್ಲದೇ ಆ ಪ್ರಕ್ರಿಯೆಯಲ್ಲಿ ಸ್ಪಷ್ಟತೆ ಮತ್ತು ದೂರದೃಷ್ಟಿಯನ್ನು ಕಾಯ್ದುಕೊಂಡು, ನೀತಿಯೊಂದಿಗೆ ಯಾವತ್ತಿಗೂ ವಾಣಿಜ್ಯ ಹಿತಾಸಕ್ತಿಗಳನ್ನು ಬೆರೆಸದೇ ಕಾರ್ಯನಿರ್ವಹಿಸಿದ್ದಾರೆ.
  • ಕದಂಬ ನಾಯಕತ್ವ: 2000 ನೇ ಇಸವಿಯಿಂದಲೇ ಕದಂಬ ಹೆಸರಿನ ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಶ್ರೀ ಅನಂತಕುಮಾರ್ ಹೆಗಡೆ ಅವರು, ಎನ್‌ಜಿಓಗಳು, ಸಹಕಾರಿ ಸಂಸ್ಥೆಗಳು ಮತ್ತು ಖಾಸಗಿ ಉದ್ಯಮಗಳನ್ನು ಒಳಗೊಂಡ ಕದಂಬ ಸಮೂಹದ ನಿರ್ಮಾತೃವಾಗಿದ್ದಾರೆ. ಕದಂಬವು ಸಹಕಾರಿ ಮಾದರಿ, ತಂತ್ರಜ್ಞಾನ, ಕೃಷಿ ಮತ್ತು ಇತರ ಸಂಬಂಧಿತ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡುತ್ತದೆ.
  • ಸಹಕಾರಿ ಮಾದರಿಯ ಪ್ರಚಾರ: ಸಮಾಜದ ಸಾಮೂಹಿಕ ಶಕ್ತಿಯ ಮೇಲೆ ಅಪಾರ ನಂಬಿಕೆ ಹೊಂದಿರುವ ಶ್ರೀ ಅನಂತಕುಮಾರ್ ಹೆಗಡೆಯವರು, ಗ್ರಾಮೀಣ ಭಾಗದಲ್ಲಿ ಆರ್ಥಿಕ ಅಭಿವೃದ್ಧಿಗಾಗಿ ಸಹಕಾರಿ ಮಾದರಿಯನ್ನೇ ಪ್ರತಿಪಾದಿಸುವಲ್ಲಿ ಸದಾ ಮುಂಚೂಣಿಯಲ್ಲಿರುತ್ತಾರೆ, ಸಹಕಾರದ ಮಹತ್ವವನ್ನು ಪ್ರಚಾರ ಮಾಡುತ್ತಾ, ಗ್ರಾಮೀಣಾಭಿವೃದ್ಧಿಗೋಸ್ಕರ ಅನೇಕ ಸಹಕಾರಿ ಸಂಘಗಳ ಸ್ಥಾಪನೆಗೆ ಜನರನ್ನು ಒಗ್ಗೂಡಿಸಿದ್ದಾರೆ.
  • ಆರ್ಥಿಕ ಒಳಗೊಳ್ಳುವಿಕೆ: ಶ್ರೀ ಅನಂತಕುಮಾರ್ ಹೆಗಡೆ ಅವರು ಗ್ರಾಮೀಣ ಆದಾಯ ಸೃಷ್ಟಿ ಉಪಕ್ರಮಗಳ ಮೂಲಕ ಸಾವಿರಾರು ಮಹಿಳಾ ಸ್ವಸಹಾಯ ಸಂಘಗಳನ್ನು ಬೆಳೆಸಿ, ಸಾಮಾಜಿಕ - ಆರ್ಥಿಕ ಜಾಗೃತಿ ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸಿದ್ದಾರೆ.

ತಂತ್ರಜ್ಞಾನ ಮತ್ತು ನೂತನ ಆವಿಷ್ಕಾರಗಳು

  • ಹಸಿರು ನ್ಯಾನೋ ತಂತ್ರಜ್ಞಾನ: ಶ್ರೀ ಅನಂತಕುಮಾರ್ ಹೆಗಡೆ ಅವರು ಅತ್ಯಾಧುನಿಕ ಪರಿಸರ ಸ್ನೇಹಿ ಹಸಿರು ನ್ಯಾನೋ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದು, ಕ್ಯಾನ್ಸರ್ ಚಿಕಿತ್ಸಾ ಉತ್ಪನ್ನಗಳು, ನ್ಯಾನೋ ಆಯುರ್ವೇದ, ನ್ಯಾನೋ ಆರೋಗ್ಯ–ಸ್ವಚ್ಛತೆ, ನ್ಯಾನೋ ಕಾಸ್ಮೆಟಿಕ್ಸ್, ಕ್ರಿಯಾತ್ಮಕ ಆಹಾರ ಉತ್ಪನ್ನಗಳು ಸೇರಿದಂತೆ ಹಲವಾರು ನವೀನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ದೃಷ್ಟಿಕೋನ ಮತ್ತು ಪರಿಣಾಮ

ಅವರು ಜನಸಾಮಾನ್ಯರ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಒತ್ತು ನೀಡುವ ನಾಯಕನಾಗಿ, ಕದಂಬ ಸಂಸ್ಥೆಯ ಮೂಲಕ ಸಮಗ್ರ ಅಭಿವೃದ್ಧಿ ಮತ್ತು ಸೇವಾ ಆಧಾರಿತ ಕಾರ್ಯಗಳನ್ನು ಮುನ್ನಡೆಸುತ್ತಿದ್ದಾರೆ.

Image

ಪ್ರಸ್ತುತ ಅವರು ಮುನ್ನಡೆಸುತ್ತಿರುವ ಸಂಸ್ಥೆಗಳು:

  • ಕದಂಬ ಸೌಹಾರ್ದ ಸಹಕಾರಿ ಸಂಘ ನಿಯಮಿತ
  • ಕದಂಬ ಮೈಮನಿ ಲಿಮಿಟೆಡ್ (NBFC)
  • ಕದಂಬ ಗ್ರೀನ್ ನ್ಯಾನೋಟೆಕ್
  • ಕದಂಬ ಸಾಫ್ಟ್–ಟೆಕ್
  • ಕದಂಬ ಫಂಕ್ಷನಲ್ ಫುಡ್ಸ್
  • ಕದಂಬ ಆಗ್ರೋಟೆಕ್
  • ಕದಂಬ ಇ–ಕಾಮರ್ಸ್
  • ಕದಂಬ ಫೌಂಡೇಶನ್

Our Team

As always united, to serve you!

Person

Krishna Esale
VICE-PRESIDENT

Person

Prakash Madguni
DIRECTOR

Person

Shripad Bhat
DIRECTOR

Person

Ashok Hegde
DIRECTOR

Person

KS Lakshmish
DIRECTOR

Person

Shrikant Naik
DIRECTOR

Person

Subash Mundoor
DIRECTOR

Person

Dr Deepa Prakash
DIRECTOR

Person

Shrilakshmi Bhat
DIRECTOR

Person

Arunkumar Naik
DIRECTOR

Person

Hanumanta T M
DIRECTOR

Person

Susan Chung
DIRECTOR

Person

K L Sriram
DIRECTOR

Person

Iladevi Keertan
DIRECTOR

Person

Akshaya Bhat
DIRECTOR

kadamba logo