ಹಿರಿಯ ನಾಗರಿಕರ ಮಾಸಿಕ ಆದಾಯ ಠೇವಣಿ ಯೋಜನೆ
(Senior Citizens Monthly Income Deposit Scheme – SCMIDS)
ಕದಂಬವು ಹಿರಿಯ ನಾಗರಿಕರಿಗೆ ಅವರ ನಿವೃತ್ತ ಕಾಲಾವಧಿಯಲ್ಲಿ ನಿಯಮಿತವಾದ ಹಾಗೂ ಸುಭದ್ರವಾದ ಆದಾಯವನ್ನು ಒದಗಿಸುವ ಬದ್ಧತೆಯನ್ನು ಹೊಂದಿದೆ. 2000ರಲ್ಲಿ ಪ್ರಾರಂಭಗೊಂಡ ಸೀನಿಯರ್ ಸಿಟಿಝನ್ಸ್ ಮಂತ್ಲಿ ಇನ್ಕಮ್ ಡೆಪಾಸಿಟ್ ಸ್ಕೀಮ್ (SCMIDS) ಎಂಬ ಈ ಯೋಜನೆಯು ವಿಶೇಷವಾಗಿ ರಚಿಸಲಾದ ಉಳಿತಾಯ ಖಾತೆ ಯೋಜನೆಯಾಗಿದ್ದು ಹಿರಿಯ ನಾಗರಿಕರಿಗೆ ಮತ್ತು ನಿವೃತ್ತ ಜೀವನವನ್ನು ನಡೆಸುತ್ತಿರುವವರಿಗೆ ಆರ್ಥಿಕ ಸಹಾಯವಾಗುವಂತೆ ಮತ್ತು ಅವರಿಗೆ ನಿರಂತರ ಆದಾಯ ಲಭ್ಯವಾಗುವಂತೆ ರೂಪಿಸಲಾಗಿದೆ.
ಅರ್ಹತಾ ಮಾನದಂಡಗಳು
ವಯಸ್ಸು:
ಗ್ರಾಹಕರು 60 ವರ್ಷ ಮೇಲ್ಪಟ್ಟವರಾಗಿರಬೇಕು.
ಅವಧಿ:
ಠೇವಣಿಯ ಅವಧಿ 5 ವರ್ಷಗಳು
ಪ್ರಮುಖ ವೈಶಿಷ್ಟ್ಯಗಳು
ಅತೀ ಹೆಚ್ಚಿನ ಆದಾಯ:
ನಮ್ಮ SCMIDS ದೇಶದಲ್ಲೇ ಅತ್ಯಂತ ಹೆಚ್ಚು ಪ್ರತಿಫಲ ನೀಡುವ ಮಾಸಿಕ ಆದಾಯ ಯೋಜನೆಗಳಲ್ಲಿ ಒಂದು
ಕನಿಷ್ಠ ಠೇವಣಿ:
ರೂ. 1,00,000 (ಒಂದು ಲಕ್ಷ ರೂಪಾಯಿ) ಗಳನ್ನು ಕಡ್ಡಾಯವಾಗಿ ಠೇವಣಿ ಇಡಬೇಕಾಗುತ್ತದೆ.
SMS ಸೌಲಭ್ಯ:
SMS ಮೂಲಕ ನಿಯಮಿತವಾದ ಅಪ್ಡೇಟ್ ಗಳೊಂದಿಗೆ ಮಾಹಿತಿ ಪಡೆಯಬಹುದು
ಹಣ ವರ್ಗಾವಣೆ:
MMA / NEFT / RTGS
ಮಾಸಿಕ ಬಡ್ಡಿ ಪಾವತಿ:
ಗ್ರಾಹಕರಿಗೆ ಪ್ರತೀ ತಿಂಗಳೂ ಬಡ್ಡಿ ಹಣದ ಪಾವತಿ ಸೌಲಭ್ಯ
ಸಾಲ ಸೌಲಭ್ಯ:
ಠೇವಣಿ ಮೊತ್ತದ ಗರಿಷ್ಠ 90% ವರೆಗೂ ಗ್ರಾಹಕರು ಸಾಲ ಪಡೆಯುವ ಸೌಲಭ್ಯ