gold loan

ವೇತನ ಸಾಲ (Salary Loan)

  • ವೇತನ ಸಾಲ ಎಂಬುದು ತೀರಾ ಅಗತ್ಯವಿರುವ ಸಂದರ್ಭಗಳಲ್ಲಿ ಪರಿಚಿತರಿಂದ ಹಣ ಸಾಲ ಪಡೆಯುವ ಅವಶ್ಯಕತೆಯನ್ನು ತಪ್ಪಿಸಿ, ಸುಲಭ ಹಾಗೂ ಗೌಪ್ಯ ರೀತಿಯಲ್ಲಿ ಹಣಕಾಸು ನೆರವು ಪಡೆಯಲು ಸಹಾಯಕವಾಗುವ ಸಾಲ ಸೌಲಭ್ಯವಾಗಿರುತ್ತದೆ.
  • ವೇತನದ ಆಧಾರದ ಮೇಲೆ ವೈಯಕ್ತಿಕ ಸಾಲವನ್ನು ಪಡೆಯುವ ಪ್ರಕ್ರಿಯೆಯನ್ನು ಕದಂಬ ಸಹಕಾರಿ ಸಂಸ್ಥೆಯು ಇನ್ನಷ್ಟು ಸುಲಭಗೊಳಿಸಿದ್ದು, ತಿಂಗಳಿಗೆ ಕನಿಷ್ಠ ರೂ.10,000/- ವೇತನ ಪಡೆಯುವ ವ್ಯಕ್ತಿಗಳಿಗೂ ಅತ್ಯಂತ ಕಡಿಮೆ ಅಥವಾ ಶೂನ್ಯ ದಾಖಲೆಗಳೊಂದಿಗೆ ಈ ಸಾಲ ಸೌಲಭ್ಯವನ್ನು ಕದಂಬ ಒದಗಿಸುತ್ತದೆ. ಸಾಲ ಪಡೆಯುವ ಗ್ರಾಹಕರು ಮಂಜೂರಾದ ತಮ್ಮ ಸಾಲದ ಮೊತ್ತವನ್ನು ತಮ್ಮ ಇಚ್ಛೆಯಂತೆ ಬಳಸುವ ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ.

gold loan banner

ಪ್ರಮುಖ ವೈಶಿಷ್ಟ್ಯಗಳು

  • ಗರಿಷ್ಠ ಸಾಲ ಮೊತ್ತ ರೂ. 20,00,000/- (ರೂಪಾಯಿ ಇಪ್ಪತ್ತು ಲಕ್ಷ ಮಾತ್ರ)
  • ಸ್ಪರ್ಧಾತ್ಮಕ ಬಡ್ಡಿದರಗಳು
  • ಪ್ರತಿದಿನದ ಇಳಿಕೆಯಾಗುವ ಶಿಲ್ಕಿನ ಆಧಾರದ ಮೇಲೆ ಬಡ್ಡಿ ಲೆಕ್ಕಾಚಾರ
  • ಅತ್ಯಂತ ಪಾರದರ್ಶಕ ಬೆಲೆ, ಯಾವುದೇ ರೀತಿಯ ಗುಪ್ತ ವೆಚ್ಚಗಳಿಲ್ಲ.
  • ಕಡಿಮೆ ಪ್ರಕ್ರಿಯೆ ಶುಲ್ಕಗಳು
  • ಕನಿಷ್ಠ ದಾಖಲೆಗಳ ಅವಶ್ಯಕತೆ
  • ಎರಡನೇ ಬಾರಿ ಸಾಲ ಪಡೆಯುವ ಆಯ್ಕೆ (ಅರ್ಹತೆ ಮತ್ತು ನಿಯಮಗಳಿಗೆ ಒಳಪಟ್ಟಂತೆ)
  • ಯಾವುದೇ ರೀತಿಯ ಭದ್ರತೆ ಅಥವಾ ಜಾಮೀನುದಾರರ ಅವಶ್ಯಕತೆ ಇಲ್ಲ
gold loan banner
gold loan banner
kadamba logo