ವ್ಯವಹಾರ ಸಾಲವು ವಾಣಿಜ್ಯ ಉದ್ದೇಶಗಳಿಗೆಂದೇ ವಿನ್ಯಾಸಗೊಳಿಸಲಾದ, ವ್ಯಾಪಾರಗಳ ವಿಸ್ತರಣೆ ಮಾಡುವಾಗ ಎದುರಾಗುವ ವಿವಿಧ ರೀತಿಯ ಆರ್ಥಿಕ ಅಗತ್ಯಗಳಿಗೆ ಬೆಂಬಲ ನೀಡುವ ಮತ್ತು ಬಂಡವಾಳ ಒದಗಿಸುವ ಪೂರಕ ಸಾಲ ಸೌಲಭ್ಯವಾಗಿರುತ್ತದೆ.
ಈ ವ್ಯವಹಾರ ಸಾಲಗಳು ವಿವಿಧ ಸ್ವರೂಪಗಳಲ್ಲಿ ಲಭ್ಯವಿದ್ದು, ಇದರಲ್ಲಿ ಬ್ಯಾಂಕ್ ಸಾಲಗಳು, ಮೆಝನೈನ್ ಸಾಲಸೌಲಭ್ಯ (Mezzanine Financing), ಆಸ್ತಿ ಆಧಾರಿತ ಸಾಲಸೌಲಭ್ಯ (Asset-based Financing), ಇನ್ವಾಯ್ಸ್ ಸಾಲಸೌಲಭ್ಯ (Invoice Financing), ಮೈಕ್ರೋ ಸಾಲಗಳು (Micro Loans), ವ್ಯವಹಾರಕ್ಕಾಗಿ ನಗದು ಮುಂಗಡ (Business Cash Advance) ಹಾಗೂ ನಗದು ಹರಿವು ಆಧಾರಿತ ಸಾಲಗಳು (Cash Flow Loans) ಮುಂತಾದವುಗಳು ಒಳಗೊಂಡಿರುತ್ತವೆ.
ಕದಂಬ ಸಹಕಾರಿ ಸಂಸ್ಥೆಯ ಈ ಸಾಲ ಸೌಲಭ್ಯವನ್ನು ನಿಮ್ಮ ವ್ಯವಹಾರ ವಿಸ್ತರಣೆಗೆ ಸೂಕ್ತವಾದ ಸಾಲ ಸೌಲಭ್ಯ ನೀಡಲಿಕ್ಕಾಗಿಯೇ ರೂಪಿಸಲಾಗಿದೆ. ನಿಮಗೆ ಯಂತ್ರೋಪಕರಣಗಳ ಖರೀದಿ ಮಾಡಬೇಕಿದ್ದರೆ, ಕಾರ್ಯನಿರ್ವಹಣಾ ಬಂಡವಾಳ (Working Capital)ವನ್ನು ಹೆಚ್ಚಿಸಬೇಕಿದ್ದರೆ ಅಥವಾ ಇತರೆ ನಿರ್ದಿಷ್ಟ ಹಣಕಾಸಿನ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ, ಸದಸ್ಯರ ಅವಶ್ಯಕತೆಗೆ ಅನುಗುಣವಾಗಿ ರೂಪುಗೊಳಿಸಲಾದ ಸೌಲಭ್ಯ ಇದು.
ಪ್ರಮುಖ ವೈಶಿಷ್ಟ್ಯಗಳು
ಸರಳೀಕೃತ ಮತ್ತು ಸುಗಮ ದಾಖಲೆ ಪ್ರಕ್ರಿಯೆ
ಪ್ರತಿದಿನದ ಸರಾಸರಿ ಶಿಲ್ಕಿನ ಆಧಾರದ ಮೇಲೆ ಬಡ್ಡಿ ಲೆಕ್ಕಾಚಾರ
ಸಾಲದ ಅವಧಿಪೂರ್ವ ತೀರುವಳಿಗೆ ದಂಡ ಇಲ್ಲ.
ಗರಿಷ್ಠ ಸಾಲದ ಮೊತ್ತ: ರೂ. 50,00,000/- (ರೂಪಾಯಿ ಐವತ್ತು ಲಕ್ಷ ಮಾತ್ರ)