ಕದಂಬದ ವಿಶಿಷ್ಟ ಸಮುದಾಯ ಬ್ಯಾಂಕಿಂಗ್ ವ್ಯಾವಹಾರಿಕ ಮಾದರಿ ಕದಂಬವು ತನ್ನ ವಿಶಿಷ್ಟ ಸಮುದಾಯ ಬ್ಯಾಂಕಿಂಗ್ ವ್ಯವಹಾರ ಮಾದರಿ (Community Banking Business Model) ಯ ಅಡಿಯಲ್ಲಿ ಇಡೀ ಆರ್ಥಿಕ ವಲಯದಲ್ಲೇ ಒಂದು ಹೊಚ್ಚಹೊಸದಾದ ಪರಿಕಲ್ಪನೆಯನ್ನು ಹೆಮ್ಮೆಯಿಂದ ಪರಿಚಯಿಸುತ್ತಿದೆ. ವಿಶೇಷವಾಗಿ ವಿನ್ಯಾಸಗೊಳಿಸಲ್ಪಟ್ಟ ಈ ಆರ್ಥಿಕ ಯೋಜನೆಯು ಠೇವಣಿದಾರರು ಮತ್ತು ಸಾಲ ಪಡೆಯುವವರು, ಹೀಗೆ ಇಬ್ಬರಿಗೂ ಸಮಾನವಾಗಿ ಗಮನಾರ್ಹ ಲಾಭ ನೀಡುವ ಯೋಜನೆಯಾಗಿದ್ದು, ಬ್ಯಾಂಕಿಂಗ್ ವ್ಯವಹಾರದಲ್ಲಿ ಗ್ರಾಹಕ ಕೇಂದ್ರಿತ ದೃಷ್ಟಿಕೋನದ ಒಂದು ಅತ್ಯಂತ ನವೀನ ಪರಿಕಲ್ಪನೆಯಾಗಿದೆ.
ಯೋಜನೆಯ ಅವಲೋಕನ (Overview): ಮೈ ಮನಿ – RD, ಕದಂಬ ಸಹಕಾರಿ ಸಂಸ್ಥೆ ಪ್ರಸ್ತುತಪಡಿಸುವ ವಿಶಿಷ್ಟ ಪುನರಾವರ್ತಿತ ಠೇವಣಿ ಯೋಜನೆಯಾಗಿದ್ದು, ಒಂದು ನಿಗದಿತ ಅವಧಿಯಲ್ಲಿ ನಿಯಮಿತವಾಗಿ ಹಣವನ್ನು ಉಳಿತಾಯ ಮಾಡುವ ಅವಕಾಶವನ್ನು ನೀಡುತ್ತದೆ. ಜೊತೆಗೆ, ಉಳಿತಾಯದ ಮೇಲೆ ಗರಿಷ್ಠ ಬಡ್ಡಿ ಆದಾಯವನ್ನು ಪಡೆಯಲು ಸಹಾಯಮಾಡುತ್ತದೆ.
ಯೋಜನೆಯ ಉದ್ದೇಶ (Purpose): ಒಂದು ನಿರ್ದಿಷ್ಟ ಮೊತ್ತವನ್ನು ಒಂದು ನಿಗದಿತ ಅವಧಿಗೆ ನಿಯಮಿತವಾಗಿ ಉಳಿತಾಯ ಮಾಡಲು ಬಯಸುವ ಸದಸ್ಯರಿಗಾಗಿಯೇ ವಿಶೇಷವಾಗಿ ಮೈಮನಿ ಖಾತೆಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯು ಉಳಿತಾಯದ ಅಭ್ಯಾಸವನ್ನು ಬೆಳೆಸಿಕೊಳ್ಳಲು ಉತ್ತೇಜಿಸುತ್ತದೆ.
ಠೇವಣಿ ಅವಧಿ ಮತ್ತು ವಿಧಾನ (Deposit Frequency): ಈ ಯೋಜನೆಯ ಅಡಿಯಲ್ಲಿ ಸದಸ್ಯರು ಪ್ರತೀ ತಿಂಗಳು ಕೂಡಾ ನಿಯಮಿತವಾಗಿ ಪುನರಾವರ್ತಿತವಾಗಿ ಠೇವಣಿಯನ್ನು ಮಾಡಬೇಕಾಗುತ್ತದೆ. ಖಾತೆ ತೆರೆಯುವ ಸಮಯದಲ್ಲಿ ನಿಗದಿಪಡಿಸಲಾದ ಮೊತ್ತವೇ ಸಂಪೂರ್ಣ ಅವಧಿಯವರೆಗೆ ಅನ್ವಯವಾಗುತ್ತದೆ.
ವಿಶೇಷ ವೈಶಿಷ್ಟ್ಯಗಳು (Special Features)
ಸಮುದಾಯ ಬ್ಯಾಂಕಿಂಗ್ ವ್ಯಾವಹಾರಿಕ ಮಾದರಿ:
ಕದಂಬ ರೂಪಿಸಿರುವ ಈ ನೂತನ ವ್ಯಾವಹಾರಿಕ ಮಾದರಿಯು ಸಮುದಾಯದ ಸಮೂಹ ಹಣಕಾಸು ವೃದ್ಧಿ, ಆರ್ಥಿಕ ಸ್ಥಿರತೆ ಮತ್ತು ಪರಸ್ಪರ ಸಹಕಾರದ ತತ್ವಗಳನ್ನು ಆಧರಿಸಿದೆ.
ಹೂಡಿಕೆ ಅವಧಿಯಲ್ಲಿ ವಿಪುಲ ಆಯ್ಕೆಗಳು:
ಸದಸ್ಯರು ತಮ್ಮ ಆರ್ಥಿಕ ಅನುಕೂಲಕ್ಕೆ ತಕ್ಕಂತೆ 18, 24 ಮತ್ತು 36 ತಿಂಗಳ ಅವಧಿಯ ಯೋಜನೆಗಳನ್ನು ಹೂಡಿಕೆಗೆ ಆಯ್ಕೆಮಾಡಿಕೊಳ್ಳಬಹುದು. ಈ ಯೋಜನೆಯಲ್ಲಿ ಸಾಕಷ್ಟು ಸಡಿಲಿಕೆ ಇದ್ದು ಸದಸ್ಯರಿಗೆ ಹೂಡಿಕೆ ಅವಧಿಯಲ್ಲಿ ಹಲವಾರು ಆಯ್ಕೆಗಳಿವೆ
ಹೆಚ್ಚುವರಿ ಆದಾಯ ಸಾಧ್ಯತೆ:
ಈ ಯೋಜನೆಯ ಮೂಲಕ ಸದಸ್ಯರು ತಾವು ಗಳಿಸುವ ಮೂಲ ಬಡ್ಡಿಯೊಂದಿಗೆ,ತಾವು ನಡೆಸಿದ ವ್ಯವಹಾರಕ್ಕೆ ಪೂರಕವಾಗಿ ಪಡೆಯುವ ಪ್ರೋತ್ಸಾಹ ಧನವನ್ನೂ ಸೇರಿಸಿ ಒಟ್ಟು ಅತ್ಯಂತ ಹೆಚ್ಚು ಲಾಭ ಪಡೆಯುತ್ತಾರೆ.
ಚಂದಾದಾರಿಕೆ ಆಧಾರಿತ ಮಾದರಿ:
ಇತರ ಗುಂಪು ಆಧಾರಿತ ಸಾಂಪ್ರದಾಯಿಕ ಉಳಿತಾಯ ಯೋಜನೆಗಳಿಗಿಂತ ಭಿನ್ನವಾಗಿ, ನಮ್ಮ ಈ ಯೋಜನೆಯು ವೈಯಕ್ತಿಕ ಚಂದಾದಾರಿಕೆ ಪಡೆಯುವ ಸ್ವಾತಂತ್ರ್ಯವನ್ನೊದಗಿಸುತ್ತದೆ ಮತ್ತು ಆ ಮೂಲಕ ಸದಸ್ಯರಿಗೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡುತ್ತದೆ.
ಸಂಪೂರ್ಣ ಡಿಜಿಟಲ್ ಕಾರ್ಯನಿರ್ವಹಣೆ :
ಈ ಯೋಜನೆಯ ಸಂಪೂರ್ಣ ಪ್ರಕ್ರಿಯೆಯು ಡಿಜಿಟಲ್ ವ್ಯವಸ್ಥೆಯ ಮೂಲಕ ನಿರ್ವಹಿಸಲ್ಪಡುವುದರಿಂದ ಸದಸ್ಯರಿಗೆ ಹೆಚ್ಚಿನ ಅನುಕೂಲತೆ,ಪಾರದರ್ಶಕತೆ ಮತ್ತು ಕ್ಷಮತೆ ಖಚಿತ.
ಪ್ರವೇಶ ಮತ್ತು ನಿರ್ಗಮನದ ಸ್ವಾತಂತ್ರ್ಯ:
ಸದಸ್ಯರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಯಾವುದೇ ಸಮಯದಲ್ಲಾದರೂ ಈ ಯೋಜನೆಯಲ್ಲಿ ಪ್ರವೇಶಿಸುವ ಮತ್ತು ನಿರ್ಗಮಿಸುವ ಅವಕಾಶವಿದ್ದು ಇದರಿಂದಾಗಿ ಇತರ ಯೋಜನೆಗಳಿಗಿಂತ ಭಿನ್ನವಾಗಿ ಸರಿಸಾಟಿಯಿಲ್ಲದ ಅನುಕೂಲತೆ ಮತ್ತು ಸ್ವಾತಂತ್ರ್ಯವನ್ನು ಒದಗಿಸುತ್ತದೆ.
ಈ ಯೋಜನೆಯು ನಮ್ಮ ಸದಸ್ಯರಿಗೆ ಉಳಿತಾಯವನ್ನೂ ಮಾಡುವ ಮತ್ತು ಅದೇ ಸಮಯದಲ್ಲಿ ಆದಾಯವನ್ನೂ ಗಳಿಸುವ ಸಂಭಾವ್ಯತೆಯನ್ನೊದಗಿಸುವ ಅತ್ಯಂತ ವಿಶಿಷ್ಟ ಮತ್ತು ಪ್ರಯೋಜನಕಾರಿ ಆರ್ಥಿಕ ಉಪಕರಣವಾಗಿದೆ. ನಮ್ಮ ನವೀನ ಸಮುದಾಯ ಬ್ಯಾಂಕಿಂಗ್ ವ್ಯವಹಾರ ಮಾದರಿಯ ಮೂಲಕ, ಓರ್ವ ವ್ಯಕ್ತಿಯ ಆರ್ಥಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದಕ್ಕೆ ಹಾಗೂ ಅವರ ಆರ್ಥಿಕ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಶಕ್ತರನ್ನಾಗಿಸುವುದಕ್ಕೆ ಕದಂಬ ಬದ್ಧವಾಗಿದೆ.