ಕದಂಬದಲ್ಲಿ ನಮ್ಮ ಸದಸ್ಯರ ಬೇರೆ ಬೇರೆ ವಿಧದ ಆರ್ಥಿಕ ಅಗತ್ಯಗಳನ್ನು ನಾವು ಬಹಳ ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ನಿಮ್ಮ ಆರ್ಥಿಕ ಗುರಿಗಳಿಗೆ ಅನುಗುಣವಾಗಿ ಆಯ್ಕೆಮಾಡಿಕೊಳ್ಳಲು ವಿವಿಧ ಅವಧಿಯ ಸ್ಥಿರ ಠೇವಣಿ (FD) ಯೋಜನೆಗಳನ್ನು ನಾವು ನೀಡುತ್ತೇವೆ.
ಅಲ್ಪಾವಧಿ ಠೇವಣಿ: 3 ತಿಂಗಳು, 6 ತಿಂಗಳು ಮತ್ತು 9 ತಿಂಗಳು
ದೀರ್ಘಾವಧಿ ಠೇವಣಿ: ಗರಿಷ್ಠ 5 ವರ್ಷಗಳವರೆಗೆ
ಆಕರ್ಷಕ ಬಡ್ಡಿದರ ಠೇವಣಿ ಅವಧಿಗೆ ಅನುಗುಣವಾಗಿ ಸ್ಪರ್ಧಾತ್ಮಕ ಮತ್ತು ಆಕರ್ಷಕ ಬಡ್ಡಿದರಗಳನ್ನು ಕದಂಬ ಒದಗಿಸುತ್ತದೆ. ನಿಮ್ಮ ಹೂಡಿಕೆಯ ಯೋಜನೆಗಳಿಗೆ ತಕ್ಕುದಾದ ಅತ್ಯುತ್ತಮ ಆಯ್ಕೆ ಯಾವುದು ಅಂತ ಕಂಡುಕೊಳ್ಳಲು ನಾವು ನಿಗದಿಪಡಿಸಿದ ನಮ್ಮ ಬಡ್ಡಿದರ ಪಟ್ಟಿಯನ್ನು ಪರಿಶೀಲಿಸಬಹುದು.
ಸ್ಥಿರ ಠೇವಣಿಯ ಷರತ್ತುಗಳು
ಕನಿಷ್ಠ ಠೇವಣಿ ಮೊತ್ತ:
ರೂ. 5,000
ಕನಿಷ್ಠ ಅವಧಿ:
30 ದಿನಗಳು
ಗರಿಷ್ಠ ಅವಧಿ:
5 ವರ್ಷಗಳು
ಮಹತ್ವದ ಸೂಚನೆ
ಹಕ್ಕು ನಿರಾಕರಣೆಯ ಸ್ಪಷ್ಟನೆ (Disclaimer): ಕದಂಬದ ಎಲ್ಲಾ ಉತ್ಪನ್ನಗಳು ಮತ್ತು ಸೇವೆಗಳು ಕೇವಲ ನಮ್ಮ ಸದಸ್ಯರಿಗೆ ಮಾತ್ರ ಲಭ್ಯವಿರುತ್ತವೆ. ನೀವು ಇನ್ನೂ ಸದಸ್ಯರಾಗಿರದಿದ್ದರೆ, ನಮ್ಮಲ್ಲಿ ಸದಸ್ಯತ್ವವನ್ನು ಪಡೆದು ನಮ್ಮ ಸಮುದಾಯದಲ್ಲಿ ಸೇರಿ ಈ ಪ್ರಯೋಜನಕಾರಿ ಸೇವೆಗಳನ್ನು ಪಡೆಯುವಂತೆ ವಿನಂತಿಸುತ್ತೇವೆ.
ನಿಮ್ಮ ಆರ್ಥಿಕ ಭವಿಷ್ಯವನ್ನು ಕದಂಬದೊಂದಿಗೆ ಸುರಕ್ಷಿತವಾಗಿರಿಸಿ: ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ಗ್ರಾಹಕ ಸೇವಾ ವಿಭಾಗವನ್ನು ಸಂಪರ್ಕಿಸಿ.