Image

ಕದಂಬ ಸೌಹಾರ್ದ ಸಹಕಾರಿ ಸಂಘ (ನಿಯಮಿತ)

ನಿರ್ವಹಣಾ ಮಂಡಳಿಯ ವೃತ್ತಿಪರ ಬದ್ಧತೆಯ ದೃಷ್ಟಿಕೋನದ ಫಲವಾಗಿ, ಕದಂಬ ಸೌಹಾರ್ದ ಸಹಕಾರಿ ನಿಯಮಿತ ಉನ್ನತ ಗುಣಮಟ್ಟದ ಸೇವೆ, ಗ್ರಾಹಕಕೇಂದ್ರಿತ ವಿಶ್ವಾಸಾರ್ಹ ಸಹಕಾರಿ ಬ್ಯಾಂಕಿಂಗ್ ವಿಧಾನದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ.

ನಮ್ಮ ಸದಸ್ಯರ ಇಂದಿನ ಹಾಗೂ ಭವಿಷ್ಯದ ಆರ್ಥಿಕ ಅಗತ್ಯಗಳನ್ನು ಪೂರೈಸಲು ಸಮರ್ಥವಾದ ಸಂಸ್ಥೆ ಎಂಬ ಹೆಮ್ಮೆಯೊಂದಿಗೆ, ಕದಂಬ ಅತ್ಯುನ್ನತ ಸೇವಾ ಗುಣಮಟ್ಟ, ಶ್ರೇಷ್ಠಮಟ್ಟದ ಕಾರ್ಯನಿರ್ವಹಣೆ ಹಾಗೂ ಸಮಗ್ರ ರೀತಿಯ ಹಣಕಾಸು ಮತ್ತು ಬ್ಯಾಂಕಿಂಗ್ ಮಾರ್ಗೋಪಾಯಗಳನ್ನು ತನ್ನ ಸದಸ್ಯರಿಗೆ ಒದಗಿಸುತ್ತದೆ.

ಕದಂಬ ಸೌಹಾರ್ದ ಸಹಕಾರಿ ಲಿಮಿಟೆಡ್

ಕದಂಬ ಸೌಹಾರ್ದ ಸಹಕಾರಿ ಸಂಘವು ಹೊಸ ತಲೆಮಾರಿನ ಸಹಕಾರಿ ಸಂಸ್ಥೆಗಳ ಪರವಾದ ಧ್ವನಿಯಾಗಿ, ಕರ್ನಾಟಕದಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ವ್ಯಾವಹಾರಿಕ ಮಾದರಿಯೊಂದನ್ನು ಉತ್ತೇಜಿಸುವ ಮತ್ತು ಆ ಮೂಲಕ ನಮ್ಮ ಪಾಲುದಾರರ ಆರ್ಥಿಕ ಬೆಳವಣಿಗೆಯ ಜೊತೆಗೆ ಅವರಲ್ಲೊಂದು ಸಮಾಜಮುಖಿ ಪರಿವರ್ತನೆ ತರುವ ಉದ್ದೇಶ ಹೊಂದಿದೆ. ಜನಕೇಂದ್ರಿತವಾದ ವ್ಯವಹಾರ ಮಾದರಿಯ ಮೂಲಕ ಮತ್ತು ಇತರ ಸ್ಥಳೀಯ ಸಂಸ್ಥೆಗಳ ಜೊತೆಜೊತೆಗೆ ಒಟ್ಟಾಗಿ ಕಾರ್ಯನಿರ್ವಹಿಸಿ ನಮ್ಮ ಪಾಲುದಾರರ ಸರ್ವತೋಮುಖ ಆರ್ಥಿಕ ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರ ವಹಿಸುವುದೇ ನಮ್ಮ ಧ್ಯೇಯವಾಗಿದೆ. ಈ ಮೂಲ

Image

ಕ ವ್ಯಕ್ತಿಗತ ಗ್ರಾಹಕರಿಂದ ಹಿಡಿದು ವಿವಿಧ ವ್ಯಾವಹಾರಿಕ ಸಂಸ್ಥೆಗಳನ್ನೊಳಗೊಂಡಂತೆ ಎಲ್ಲಾ ಸ್ಥರಗಳಲ್ಲೂ ಒಂದು ಚೈತನ್ಯಶೀಲ ವ್ಯಾವಹಾರಿಕ ಮತ್ತು ಸೇವಾ ಜಾಲವನ್ನು ನಿರ್ಮಿಸಬಹುದಾಗಿದೆ. ನಮ್ಮ ಸದಸ್ಯರ ಬಹುಮುಖೀ ಸಾಮಾಜಿಕ–ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಲ್ಲಿ ಮಾಹಿತಿಯ ವಿನಿಮಯ, ಪರಸ್ಪರ ಸಹಕಾರ, ಸಮನ್ವಯ ಮತ್ತು ನಾಗರಿಕ ಸಮಾಜದ ವೇದಿಕೆಗಳೊಂದಿಗೆ ಬಾಂಧವ್ಯವನ್ನು ಬಲಪಡಿಸುವ ಮೂಲಕ ಸಮಗ್ರ ಅಭಿವೃದ್ಧಿ ನೀತಿಗಳನ್ನು ಅನುಷ್ಠಾನಗೊಳಿಸುವುದೇ ಕದಂಬದ ಪ್ರಧಾನ ಉದ್ದೇಶವಾಗಿದೆ.

ಕದಂಬ ಸೌಹಾರ್ದ ಸಹಕಾರಿ ಸಂಘವು “ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ – 1997” ಅಡಿಯಲ್ಲಿ ಸ್ಥಾಪಿತವಾಗಿದ್ದು, ಸಿರ್ಸಿಯಲ್ಲಿ ಮುಖ್ಯ ಕಚೇರಿ ಹೊಂದಿದೆ, ಉತ್ತರ ಕನ್ನಡ ಜಿಲ್ಲೆ, ಮೈಸೂರು, ಮಂಗಳೂರು, ಮಲ್ಲೇಶ್ವರಂ ಮುಂತಾದ ಕಡೆ ಐದು ಶಾಖೆಗಳನ್ನು ಹೊಂದಿದ್ದು, ಬೆಂಗಳೂರಿನಲ್ಲಿ ಕಾರ್ಪೊರೇಟ್ ಕಚೇರಿ ಇದೆ.

ನಮ್ಮ ವಿಶೇಷ ಸೇವೆಗಳು

  • 100% ಡಿಜಿಟಲೀಕೃತ ಕಾರ್ಯವ್ಯವಸ್ಥೆ
  • ಅತ್ಯಾಧುನಿಕ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್
  • ಸೇವಾ ಆಧಾರಿತ ಬ್ಯಾಂಕಿಂಗ್ ಉಪಕ್ರಮಗಳು
  • ಸಮುದಾಯ ಬ್ಯಾಂಕಿಂಗ್ ದೃಷ್ಟಿಕೋನ

  • ಡಿಜಿಟಲ್ ಚಿನ್ನ ಮತ್ತು ಬೆಳ್ಳಿ ಬ್ಯಾಂಕಿಂಗ್
  • ಮಾರುಕಟ್ಟೆಯಲ್ಲೇ ಪ್ರಥಮ ಅನ್ನುವಂಥಾ ಹಣಕಾಸು ಯೋಜನೆಗಳು
  • ಡಿಜಿಟಲ್ ಹಣ ವರ್ಗಾವಣೆ ಮತ್ತು ಪಾವತಿ ಸೇವೆಗಳು
  • ಆತಿಥ್ಯಪೂರ್ಣ ಹಾಗೂ ಗ್ರಾಹಕ ಸ್ನೇಹಿ ಸೇವೆ

kadamba logo