ವಾಹನ ಸಾಲಗಳು ವ್ಯಾವಹಾರಿಕ ಅಥವಾ ವೈಯಕ್ತಿಕ ಬಳಕೆಯ ಉದ್ದೇಶಕ್ಕಾಗಿ ವಾಣಿಜ್ಯ ವಾಹನಗಳ ಮತ್ತು ವೈಯಕ್ತಿಕ ವಾಹನಗಳ ಖರೀದಿಗಾಗಿ ಸಾಲ ಪಡೆಯಲು ಉದ್ದೇಶಿಸುವ ಗ್ರಾಹಕರಿಗೆ ಒದಗಿಸಲಾಗುವ ಹಣಕಾಸು ಸೌಲಭ್ಯಗಳಾಗಿವೆ. ವಾಣಿಜ್ಯ ವಾಹನ ಸಾಲಗಳು ಬಸ್ಗಳು, ಲಾರಿಗಳು, ಟಿಪ್ಪರ್ಗಳು, ಟ್ಯಾಂಕರ್ಗಳು, ಲಘು ವಾಣಿಜ್ಯ ವಾಹನಗಳು ಹಾಗೂ ಸಣ್ಣ ವಾಣಿಜ್ಯ ವಾಹನಗಳ ಖರೀದಿಗೆ ಅನ್ವಯವಾಗುತ್ತವೆ. ಕಾರು ಸಾಲಗಳು ವೈಯಕ್ತಿಕ ಹಾಗೂ ವಾಣಿಜ್ಯ ಎರಡೂ ಉದ್ದೇಶಗಳಿಗೆ ಬಳಸಬಹುದಾದ ಸಾಲವಾಗಿದೆ. ಕದಂಬವು ಈ ವಿಭಾಗದಲ್ಲಿ ವ್ಯಕ್ತಿಗಳಿಗೂ ಮತ್ತು ಉದ್ಯಮಗಳಿಗೂ ಸರಿ ಹೊಂದುವಂತೆ ರೂಪಿಸಲಾದ ಒಂದು ಸ್ಪರ್ಧಾತ್ಮಕ ಬ್ಯಾಂಕಿಂಗ್ ಮತ್ತು ಆರ್ಥಿಕ ಪರಿಹಾರಗಳ ವಿಶಾಲ ಶ್ರೇಣಿಯನ್ನು ಒದಗಿಸುತ್ತದೆ.
ಕದಂಬದ ವಾಹನ ಸಾಲಗಳು ಸದಸ್ಯರಿಗೆ ಆಕರ್ಷಕ ಬಡ್ಡಿದರಗಳು ಮತ್ತು ವೈವಿಧ್ಯಮಯ ಸಾಲದ ಅವಧಿಗಳೊಂದಿಗೆ ಲಭ್ಯವಿದೆ. ಈ ಪೈಕಿ ಕಾರು ಸಾಲ ಈ ವಿಭಾಗದಲ್ಲಿ ಪ್ರಮುಖ ಉತ್ಪನ್ನವಾಗಿ ಗುರುತಿಸಲ್ಪಟ್ಟಿದೆ.
ಸ್ವಯಂ ಉದ್ಯೋಗ ಮಾಡುವವರು, ಸಂಬಳ ಪಡೆಯುವ ಉದ್ಯೋಗಿಗಳು, ವ್ಯಾಪಾರ ಸಂಸ್ಥೆಗಳು ಹಾಗೂ ಕೃಷಿಕ ಸಮುದಾಯ ಸೇರಿದಂತೆ ವಿವಿಧ ವೃತ್ತಿಪರ ಮತ್ತು ಸಾಮಾಜಿಕ ಹಿನ್ನೆಲೆಯ ಸದಸ್ಯರು ಈ ಸಾಲ ಸೌಲಭ್ಯಗಳಿಂದ ಪ್ರಯೋಜನ ಪಡೆಯಬಹುದು. ಈ ವಾಹನ ಸಾಲ ಯೋಜನೆಯಲ್ಲಿ ದ್ವಿಚಕ್ರ ವಾಹನಗಳು, ಬಹು ಉಪಯೋಗಿ ವಾಹನಗಳು (Multi Utility Vehicles), ಹೊಸ ಹಾಗೂ ಬಳಸಿದ (ಹಳೆಯ) ವಾಹನಗಳ ಖರೀದಿಯನ್ನು ಕೂಡಾ ಖರೀದಿಸುವ ಅವಕಾಶವಿದೆ
ಕದಂಬ ವಾಹನ ಸಾಲದ ಪ್ರಮುಖ ವೈಶಿಷ್ಟ್ಯಗಳು:
ವಾಹನದ ಆನ್–ರೋಡ್ ಬೆಲೆಯ ಶೇ.90 ರವರೆಗೆ ಗರಿಷ್ಠ ಸಾಲ ಮೊತ್ತ ಪಾವತಿ.
ಮರುಪಾವತಿ ಅವಧಿ ಗರಿಷ್ಠ 84 ತಿಂಗಳುಗಳವರೆಗೆ ಲಭ್ಯ
ಕಡಿಮೆಯಾಗುವ ಶಿಲ್ಕು ವಿಧಾನದಲ್ಲಿ (Reducing Balance Method) ಬಡ್ಡಿ ಲೆಕ್ಕಾಚಾರ – ಸರಳ ಬಡ್ಡಿ