ನಗದು ಪ್ರಮಾಣಪತ್ರಗಳು ದೀರ್ಘಾವಧಿಯ ಹೂಡಿಕೆಗಾಗಿ ಸುರಕ್ಷಿತ ಮತ್ತು ವಿಶಿಷ್ಟ ಠೇವಣಿ ಯೋಜನೆಯಾಗಿದ್ದು, ಠೇವಣಿ ಮೇಲೆ ಬಡ್ಡಿ ಗಳಿಸುತ್ತಿರುವ ಸಂದರ್ಭದಲ್ಲಿಯೇ ಒಂದು ನಿರ್ದಿಷ್ಟ ಮೊತ್ತವನ್ನು ನಿಯಮಿತವಾಗಿ ಪಡೆದುಕೊಳ್ಳುವ ಅವಕಾಶವನ್ನೂ ಈ ಯೋಜನೆ ಒದಗಿಸುತ್ತವೆ. ಅಗತ್ಯವಿದ್ದಲ್ಲಿ, ಈ ಪ್ರಮಾಣಪತ್ರಗಳ ಆಧಾರದ ಮೇಲೆ ಠೇವಣಿದಾರರು ಸಾಲವನ್ನೂ ಪಡೆಯಬಹುದು.
ಅರ್ಹತೆ
ವ್ಯಕ್ತಿಗಳು:
ವೈಯುಕ್ತಿಕವಾಗಿ ಸ್ವಂತ ಹೆಸರಿನಲ್ಲಿ ಅಥವಾ ಬೇರೆಯವರೊಂದಿಗೆ ಜಂಟಿಯಾಗಿ ನಗದು ಪ್ರಮಾಣಪತ್ರ ಪಡೆಯಬಹುದು
ಅಪ್ರಾಪ್ತವಯಸ್ಕರು:
ಅಪ್ರಾಪ್ತರೂ ಕೂಡಾ ಪಾಲಕರು ಅಥವಾ ಸಂರಕ್ಷಕರ ಮೂಲಕ ಈ ನಗದು ಪ್ರಮಾಣಪತ್ರ ಪಡೆಯಬಹುದು
ಸಂಸ್ಥೆಗಳು:
ಕ್ಲಬ್‌ಗಳು, ಸಂಘಗಳು, ಶಿಕ್ಷಣ ಸಂಸ್ಥೆಗಳು, ಟ್ರಸ್ಟ್‌ಗಳು ಮತ್ತು ವ್ಯಾಪಾರೋದ್ದಿಮೆಗಳು ಕೂಡಾ ತಮ್ಮ ತಮ್ಮ ಸಂಸ್ಥೆಗಳ ಹೆಸರಲ್ಲಿ ನಗದು ಪ್ರಮಾಣಪತ್ರ ಪಡೆಯಬಹುದು
ಪ್ರಮುಖ ವೈಶಿಷ್ಟ್ಯಗಳು
ನಾಮನಿರ್ದೇಶನ ಸೌಲಭ್ಯ :
ನಿಮ್ಮ ಹೂಡಿಕೆಗಳು ನಿಮ್ಮ ಇಚ್ಛೆಯ ಅನುಸಾರವಾಗಿಯೇ ನಿಯಂತ್ರಿತವಾಗಿರುತ್ತದೆಂಬುದನ್ನು ಈ ಮೂಲಕ ಖಚಿತಪಡಿಸಿಕೊಳ್ಳಿ
ಅವಧಿಪೂರ್ವ ಮುಕ್ತಾಯ:
ಈ ಸೌಲಭ್ಯವು ಸಹಕಾರ ಸಂಘದ ನಿಯಮಗಳಿಗೆ ಒಳಪಟ್ಟಂತೆ ಇರುತ್ತದೆ.
ಸಾಲ ಸೌಲಭ್ಯ:
ನಗದು ಪ್ರಮಾಣಪತ್ರದ ಠೇವಣಿ ಮೊತ್ತದ ಗರಿಷ್ಠ 90% ವರೆಗೆ ಸಾಲ ಪಡೆಯಬಹುದು.
ಬಡ್ಡಿ ಪಾವತಿ ವಿಧಾನ
ತ್ರೈಮಾಸಿಕ ಸಂಯೋಜನೆ (Quarterly Compounding):
ಗರಿಷ್ಠಮಟ್ಟದಲ್ಲಿ ನಿಮ್ಮ ಆದಾಯ ಹೆಚ್ಚಳವಾಗಲು ಅನುಕೂಲವಾಗುವಂತೆ ಪ್ರತೀ ಮೂರು ತಿಂಗಳಿಗೊಮ್ಮೆ ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ.
ಅರ್ಧವಾರ್ಷಿಕ ಜಮೆ :
ಪ್ರತೀ ಆರು ತಿಂಗಳಿಗೊಮ್ಮೆ ನಿಮ್ಮ ಖಾತೆಗೆ ಬಡ್ಡಿ ಹಣವನ್ನು ಜಮಾ ಮಾಡಲಾಗುತ್ತದೆ.
ಮಾಸಿಕ ಬಡ್ಡಿ ಪಾವತಿ ಆಯ್ಕೆ:
ನಿರಂತರ ಆದಾಯಕ್ಕಾಗಿ ಪ್ರತೀ ತಿಂಗಳೂ ಬಡ್ಡಿ ಹಣವನ್ನು ಪಡೆಯುವ ಅನುಕೂಲವೂ ಇದೆ.