ವೇತನ ಸಾಲ ಎಂಬುದು ತೀರಾ ಅಗತ್ಯವಿರುವ ಸಂದರ್ಭಗಳಲ್ಲಿ ಪರಿಚಿತರಿಂದ ಹಣ ಸಾಲ ಪಡೆಯುವ ಅವಶ್ಯಕತೆಯನ್ನು ತಪ್ಪಿಸಿ, ಸುಲಭ ಹಾಗೂ ಗೌಪ್ಯ ರೀತಿಯಲ್ಲಿ ಹಣಕಾಸು ನೆರವು ಪಡೆಯಲು ಸಹಾಯಕವಾಗುವ ಸಾಲ ಸೌಲಭ್ಯವಾಗಿರುತ್ತದೆ.
ವೇತನದ ಆಧಾರದ ಮೇಲೆ ವೈಯಕ್ತಿಕ ಸಾಲವನ್ನು ಪಡೆಯುವ ಪ್ರಕ್ರಿಯೆಯನ್ನು ಕದಂಬ ಸಹಕಾರಿ ಸಂಸ್ಥೆಯು ಇನ್ನಷ್ಟು ಸುಲಭಗೊಳಿಸಿದ್ದು, ತಿಂಗಳಿಗೆ ಕನಿಷ್ಠ ರೂ.10,000/- ವೇತನ ಪಡೆಯುವ ವ್ಯಕ್ತಿಗಳಿಗೂ ಅತ್ಯಂತ ಕಡಿಮೆ ಅಥವಾ ಶೂನ್ಯ ದಾಖಲೆಗಳೊಂದಿಗೆ ಈ ಸಾಲ ಸೌಲಭ್ಯವನ್ನು ಕದಂಬ ಒದಗಿಸುತ್ತದೆ. ಸಾಲ ಪಡೆಯುವ ಗ್ರಾಹಕರು ಮಂಜೂರಾದ ತಮ್ಮ ಸಾಲದ ಮೊತ್ತವನ್ನು ತಮ್ಮ ಇಚ್ಛೆಯಂತೆ ಬಳಸುವ ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ.
ಪ್ರಮುಖ ವೈಶಿಷ್ಟ್ಯಗಳು
ಗರಿಷ್ಠ ಸಾಲ ಮೊತ್ತ ರೂ. 20,00,000/- (ರೂಪಾಯಿ ಇಪ್ಪತ್ತು ಲಕ್ಷ ಮಾತ್ರ)
ಸ್ಪರ್ಧಾತ್ಮಕ ಬಡ್ಡಿದರಗಳು
ಪ್ರತಿದಿನದ ಇಳಿಕೆಯಾಗುವ ಶಿಲ್ಕಿನ ಆಧಾರದ ಮೇಲೆ ಬಡ್ಡಿ ಲೆಕ್ಕಾಚಾರ
ಅತ್ಯಂತ ಪಾರದರ್ಶಕ ಬೆಲೆ, ಯಾವುದೇ ರೀತಿಯ ಗುಪ್ತ ವೆಚ್ಚಗಳಿಲ್ಲ.
ಕಡಿಮೆ ಪ್ರಕ್ರಿಯೆ ಶುಲ್ಕಗಳು
ಕನಿಷ್ಠ ದಾಖಲೆಗಳ ಅವಶ್ಯಕತೆ
ಎರಡನೇ ಬಾರಿ ಸಾಲ ಪಡೆಯುವ ಆಯ್ಕೆ (ಅರ್ಹತೆ ಮತ್ತು ನಿಯಮಗಳಿಗೆ ಒಳಪಟ್ಟಂತೆ)