ಕದಂಬ ಸಹಕಾರಿ ಸಂಸ್ಥೆಯು "ಸಮುದಾಯ ಬ್ಯಾಂಕಿಂಗ್ ಯೋಜನೆ (MYMONEY)" ಯನ್ನು ಅತ್ಯಂತ ವ್ಯವಸ್ಥಿತ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸಿರುವ ಮೊದಲ ಸಂಸ್ಥೆಗಳ ಪೈಕಿ ಒಂದಾಗಿರುತ್ತದೆ. ಮೈ ಮನಿ ಸಾಲವು ವಿಶೇಷವಾಗಿ ಈ ಮೈ ಮನಿ ಯೋಜನೆಯ ಅಡಿಯಲ್ಲಿ ಖಾತೆ ಹೊಂದಿರುವ ನಿರ್ದಿಷ್ಟ ಸದಸ್ಯರ ಗುಂಪಿಗೆ ಮಾತ್ರ ಅನ್ವಯವಾಗುವಂತೆ ರೂಪುಗೊಂಡಿದ್ದು, ಸದಸ್ಯರ ವೈಯಕ್ತಿಕ ಹಣಕಾಸಿನ ಅಗತ್ಯಗಳಿಗೆ ಅನುಗುಣವಾಗಿ ಈ ಸಾಲ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯ ಮೂಲಕ ಕದಂಬವು ಸಾಲ ವಿತರಣೆಯಲ್ಲಿ ಹೆಚ್ಚಿನ ಮಟ್ಟಕ್ಕೆ ಒಂದು ರೀತಿಯ ವ್ಯಕ್ತಿಗತವಾದ ದೃಷ್ಠಿಕೋನವನ್ನು ಅಳವಡಿಸಿಕೊಂಡಿದೆ.
ಈ ಸಾಲ ಯೋಜನೆಯ ಅಡಿಯಲ್ಲಿ, ಸಾಲ ಮಂಜೂರು ಮಾಡುವ ಅಧಿಕಾರಿಗಳು ಸಾಲ ಪಡೆಯುವವರ ಆರ್ಥಿಕ ಸ್ಥಿತಿಗತಿಗಳನ್ನು ಸಮಗ್ರವಾಗಿ ಪರಿಶೀಲಿಸಿ, ಅವರ ಅಗತ್ಯಗಳನ್ನು ಅರ್ಥಮಾಡಿಕೊಂಡು, ಸಂಬಂಧಿತ ಬ್ಯಾಂಕಿಂಗ್ ನಿಯಮಗಳು ಮತ್ತು ಪ್ರೋಟೋಕಾಲ್ಗಳಿಗೆ ಅನುಗುಣವಾಗಿ, ಅವರ ಪರಿಸ್ಥಿತಿಗೆ ತಕ್ಕಂತೆ ಸೂಕ್ತವಾದ ಸಾಲ ನೀಡುವ ಬಗ್ಗೆ ನಿರ್ಧರಿಸುತ್ತಾರೆ.
ಸಾಲ ಉತ್ಪನ್ನಗಳ ವ್ಯಾಪ್ತಿ : ಮೈ ಮನಿ ಯೋಜನೆಯ ಅಡಿಯಲ್ಲಿ ವೈಯಕ್ತಿಕ ಸಾಲಗಳು, ಗೃಹ ಸಾಲಗಳು, ಸಣ್ಣ ವ್ಯಾಪಾರ ಸಾಲಗಳು ಸೇರಿದಂತೆ ಬೇರೆಬೇರೆ ವಿಧದ ಸಾಲ ಉತ್ಪನ್ನಗಳನ್ನು ಒದಗಿಸಲಾಗುತ್ತದೆ. ಅದರೊಂದಿಗೆ ಗ್ರಾಹಕರ ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶದಿಂದ, ಕದಂಬವು ತನ್ನದೇ ಆದ ಸಾಲ ಮಂಜೂರು ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಇದು ಪ್ರಸಕ್ತ ಜಾರಿಯಲ್ಲಿರುವ ಬ್ಯಾಂಕಿಂಗ್ ನಿಯಮಾವಳಿಗಳಿಗೆ ಸಂಪೂರ್ಣವಾಗಿ ಅನುಗುಣವಾಗಿರುತ್ತದೆ.
ಅಪಾಯ ಮೌಲ್ಯಮಾಪನ ಮತ್ತು ಸಾಲ ಮಂಜೂರು ನಿರ್ಧಾರ :
ಇತರೆ ಎಲ್ಲಾ ಹಣಕಾಸು ಸಂಸ್ಥೆಗಳಂತೆ, ಕದಂಬ ಸಹಕಾರಿ ಸಂಸ್ಥೆಯು ಕೂಡಾ ಸಾಲ ನೀಡುವಲ್ಲಿ ಇರಬಹುದಾದ ಅಪಾಯಗಳನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡಿ ಅದರ ಪ್ರಕಾರವೇ ನಿರ್ವಹಿಸುತ್ತದೆ. ಯಾರಿಗೆ ಸಾಲ ಮಂಜೂರು ಮಾಡಬೇಕೆಂಬ ತೀರ್ಮಾನಗಳು ಸಾಲ ಬೇಕೆಂದು ಅರ್ಜಿ ಸಲ್ಲಿಸಿದವರ ಕ್ರೆಡಿಟ್ ಯೋಗ್ಯತೆ, ಆರ್ಥಿಕ ಇತಿಹಾಸ ಮತ್ತು ಸ್ಥಳೀಯವಾಗಿ ಅವರ ವ್ಯವಹಾರ ಸಂಬಂಧಗಳು ಇವೆಲ್ಲವುಗಳನ್ನು ಒಟ್ಟಾಗಿ ಪರಿಶೀಲಿಸಿ ಅದರ ಆಧಾರದ ಮೇಲೆ ಕೈಗೊಳ್ಳಲಾಗುತ್ತದೆ. ಕ್ರೆಡಿಟ್ ಅಂಕಗಳು ಮತ್ತು ಹಣಕಾಸಿಗೆ ಸಂಬಂಧಿಸಿದ ದಾಖಲೆಗಳ ಜೊತೆಗೆ, ಸಾಲ ತೆಗೆದುಕೊಳ್ಳುವವರ ವ್ಯಕ್ತಿತ್ವ, ನೈತಿಕತೆ ಮತ್ತು ಸಮುದಾಯದಲ್ಲಿ ಅವರಿಗಿರುವ ಸ್ಥಾನಮಾನಗಳನ್ನೂ ಪರಿಗಣಿಸಲಾಗುತ್ತದೆ.
ನಿಯಂತ್ರಣ ಮತ್ತು ಮೇಲ್ವಿಚಾರಣೆ :
ಮೈ ಮನಿ ಯೋಜನೆಯು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಕಾರಿ ಮಾರ್ಗಸೂಚಿಗಳು, ಸಾಲ ನಿಯಮಗಳು ಮತ್ತು ಗ್ರಾಹಕ ಸಂರಕ್ಷಣಾ ಕಾಯ್ದೆಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆಗೆ ಒಳಪಟ್ಟಿರುತ್ತದೆ. ಎಲ್ಲಾ ಸಾಲಕ್ಕೆ ಸಂಬಂಧಿಸಿದ ವಹಿವಾಟುಗಳನ್ನು ಪ್ರಸ್ತುತ ಜಾರಿಯಲ್ಲಿರುವ ಕಾನೂನುಗಳ ಅನುಸಾರವಾಗಿಯೇ ನಡೆಸಲಾಗುತ್ತವೆ.
ಅರ್ಹತಾ ಮಾನದಂಡಗಳು
ಸಾಲದ ಮೊತ್ತವು ಸದಸ್ಯರು ಜಮೆ ಮಾಡುವ ಮಾಸಿಕ ಪುನರಾವರ್ತಿತ ಠೇವಣಿ (RD) ಮೊತ್ತ ಹಾಗೂ ಅವರು ಆಯ್ದುಕೊಂಡಿರುವ ಒಟ್ಟು ಅವಧಿಗೆ ನೇರವಾಗಿ ಸಂಬಂಧಿಸಿರುತ್ತದೆ.
ಲಭ್ಯವಿರುವ ಮಾಸಿಕ ಯೋಜನೆಗಳು: 18 ತಿಂಗಳು, 24 ತಿಂಗಳು ಮತ್ತು 36 ತಿಂಗಳು.
ಮೂಲ ಬಡ್ಡಿಯ ಜೊತೆಗೆ ವ್ಯವಹಾರ ಆಧಾರಿತ ಪ್ರೋತ್ಸಾಹ ಧನಗಳು ಕೂಡಾ ಅನ್ವಯವಾಗುತ್ತವೆ.
ಈ ಯೋಜನೆಯಡಿಯಲ್ಲಿ ಎಲ್ಲಾ ಕಾರ್ಯಾಚರಣೆಗಳು ಕೂಡಾ ಶೇಕಡಾ 100 ರಷ್ಟು ಡಿಜಿಟಲ್ ವಿಧಾನದಲ್ಲಿ ನಿರ್ವಹಿಸಲ್ಪಡುತ್ತವೆ.