ಸ್ಥಿರ ಠೇವಣಿ (Fixed Deposit)

  • ಕದಂಬದಲ್ಲಿ ನಮ್ಮ ಸದಸ್ಯರ ಬೇರೆ ಬೇರೆ ವಿಧದ ಆರ್ಥಿಕ ಅಗತ್ಯಗಳನ್ನು ನಾವು ಬಹಳ ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ನಿಮ್ಮ ಆರ್ಥಿಕ ಗುರಿಗಳಿಗೆ ಅನುಗುಣವಾಗಿ ಆಯ್ಕೆಮಾಡಿಕೊಳ್ಳಲು ವಿವಿಧ ಅವಧಿಯ ಸ್ಥಿರ ಠೇವಣಿ (FD) ಯೋಜನೆಗಳನ್ನು ನಾವು ನೀಡುತ್ತೇವೆ.
  • ಅಲ್ಪಾವಧಿ ಠೇವಣಿ: 3 ತಿಂಗಳು, 6 ತಿಂಗಳು ಮತ್ತು 9 ತಿಂಗಳು
  • ದೀರ್ಘಾವಧಿ ಠೇವಣಿ: ಗರಿಷ್ಠ 5 ವರ್ಷಗಳವರೆಗೆ
  • ಆಕರ್ಷಕ ಬಡ್ಡಿದರ
    ಠೇವಣಿ ಅವಧಿಗೆ ಅನುಗುಣವಾಗಿ ಸ್ಪರ್ಧಾತ್ಮಕ ಮತ್ತು ಆಕರ್ಷಕ ಬಡ್ಡಿದರಗಳನ್ನು ಕದಂಬ ಒದಗಿಸುತ್ತದೆ. ನಿಮ್ಮ ಹೂಡಿಕೆಯ ಯೋಜನೆಗಳಿಗೆ ತಕ್ಕುದಾದ ಅತ್ಯುತ್ತಮ ಆಯ್ಕೆ ಯಾವುದು ಅಂತ ಕಂಡುಕೊಳ್ಳಲು ನಾವು ನಿಗದಿಪಡಿಸಿದ ನಮ್ಮ ಬಡ್ಡಿದರ ಪಟ್ಟಿಯನ್ನು ಪರಿಶೀಲಿಸಬಹುದು.

ಸ್ಥಿರ ಠೇವಣಿಯ ಷರತ್ತುಗಳು

  • ಕನಿಷ್ಠ ಠೇವಣಿ ಮೊತ್ತ: ರೂ. 5,000
  • ಕನಿಷ್ಠ ಅವಧಿ: 30 ದಿನಗಳು
  • ಗರಿಷ್ಠ ಅವಧಿ: 5 ವರ್ಷಗಳು
  • ಮಹತ್ವದ ಸೂಚನೆ
  • ಹಕ್ಕು ನಿರಾಕರಣೆಯ ಸ್ಪಷ್ಟನೆ (Disclaimer): ಕದಂಬದ ಎಲ್ಲಾ ಉತ್ಪನ್ನಗಳು ಮತ್ತು ಸೇವೆಗಳು ಕೇವಲ ನಮ್ಮ ಸದಸ್ಯರಿಗೆ ಮಾತ್ರ ಲಭ್ಯವಿರುತ್ತವೆ. ನೀವು ಇನ್ನೂ ಸದಸ್ಯರಾಗಿರದಿದ್ದರೆ, ನಮ್ಮಲ್ಲಿ ಸದಸ್ಯತ್ವವನ್ನು ಪಡೆದು ನಮ್ಮ ಸಮುದಾಯದಲ್ಲಿ ಸೇರಿ ಈ ಪ್ರಯೋಜನಕಾರಿ ಸೇವೆಗಳನ್ನು ಪಡೆಯುವಂತೆ ವಿನಂತಿಸುತ್ತೇವೆ.
  • ನಿಮ್ಮ ಆರ್ಥಿಕ ಭವಿಷ್ಯವನ್ನು ಕದಂಬದೊಂದಿಗೆ ಸುರಕ್ಷಿತವಾಗಿರಿಸಿ: ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ಗ್ರಾಹಕ ಸೇವಾ ವಿಭಾಗವನ್ನು ಸಂಪರ್ಕಿಸಿ.
kadamba logo