ಕರ್ನಾಟಕದ ಅತ್ಯಂತ ವಿಶ್ವಾಸಾರ್ಹವೆಂದು ಗುರುತಿಸಲ್ಪಟ್ಟ ಸೌಹಾರ್ದ ಸಹಕಾರಿ ಸಂಸ್ಥೆಗಳ ಪೈಕಿ ಕದಂಬ ಸಹಕಾರಿ ಸಂಘ ಕೂಡಾ ಒಂದು. ನಮ್ಮ ಸದಸ್ಯರಿಗೆ ಸುರಕ್ಷಿತ ಹೂಡಿಕೆಗಳು, ಉತ್ತಮ ಪ್ರತಿಫಲಗಳು, ಕೆಲ ಪ್ರಾಥಮಿಕ ಉತ್ಪನ್ನಗಳಿಂದ ಹಿಡಿದು ವಿಶೇಷವಾದ ಉತ್ಪನ್ನಗಳವರೆಗೆ ತುಂಬಾ ವೈವಿಧ್ಯಮಯವಾದ ಆರ್ಥಿಕ ಯೋಜನೆಗಳನ್ನು ನಾವು ಒದಗಿಸುತ್ತೇವೆ.
ಮಯೂರ ಉಳಿತಾಯ ಖಾತೆಯನ್ನು ಏಕೆ ಆಯ್ಕೆ ಮಾಡಬೇಕು? ಉಳಿತಾಯ ಖಾತೆ ತೆರೆಯುವ ವಿಷಯದಲ್ಲಿ ಕದಂಬ ಇತರೆ ಬ್ಯಾಂಕುಗಳು ಮತ್ತು ಸಹಕಾರಿ ಸಂಸ್ಥೆಗಳಿಂದ ವಿಭಿನ್ನವಾದ ಸ್ಥಾನ ಪಡೆದಿದೆ. ನಮ್ಮ ವಿಶಿಷ್ಟ ಸೌಲಭ್ಯಗಳು ಹಾಗೂ ಹೆಚ್ಚುವರಿ ಲಾಭಗಳು ಸದಸ್ಯರಿಗೆ ಹೆಚ್ಚಿನ ಉಳಿತಾಯ ಮಾಡಲು ಮತ್ತು ಅವರ ಹೆಚ್ಚಿನ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.
ಮಯೂರ ಉಳಿತಾಯ ಖಾತೆಯ ವೈಶಿಷ್ಟ್ಯಗಳು
ಕನಿಷ್ಠ ಶಿಲ್ಕು:
ರೂ. 50,000
ಬಡ್ಡಿ ಲೆಕ್ಕಾಚಾರ:
ಪ್ರತಿದಿನದ ಸರಾಸರಿ ಶಿಲ್ಕಿನ ಆಧಾರದಲ್ಲಿ
ಬಡ್ಡಿ ಜಮೆ:
ವರ್ಷಕ್ಕೆ ಎರಡು ಬಾರಿ – ಸೆಪ್ಟೆಂಬರ್ 30 ಮತ್ತು ಮಾರ್ಚ್ 31
RTGS ಮತ್ತು NEFT:
ಸಂಪೂರ್ಣ ಉಚಿತ ವಹಿವಾಟು ಸೌಲಭ್ಯ
ಸದಸ್ಯತ್ವದ ಲಾಭಗಳು
ಕದಂಬದ ಎಲ್ಲಾ ಆರ್ಥಿಕ ಉತ್ಪನ್ನಗಳ ಉಪಯೋಗ ಮತ್ತು ಸೇವೆಗಳು ಕೇವಲ ಸದಸ್ಯರಿಗೆ ಮಾತ್ರ ಲಭ್ಯ. ಇಂದೇ ಸದಸ್ಯರಾಗಿ ಈ ವಿಶಿಷ್ಟ ಸೇವೆಗಳ ಪ್ರಯೋಜನ ಪಡೆಯಿರಿ.