gold loan

ಗೃಹೋಪಯೋಗಿ ವಸ್ತುಗಳ ಸಾಲ(Home Appliances Loan)

  • ಕದಂಬ ಸಹಕಾರಿ ಸಂಸ್ಥೆಯು ಫ್ರಿಜ್, ಟೆಲಿವಿಷನ್, ಏರ್ ಕಂಡೀಷನರ್, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಇತರೆ ಗೃಹೋಪಯೋಗಿ ಉಪಕರಣಗಳ ಖರೀದಿಗಾಗಿ ವಿಶೇಷವಾಗಿ ರೂಪಿಸಲಾದ ಸಾಲ ಸೌಲಭ್ಯವನ್ನು ಒದಗಿಸುತ್ತದೆ.
  • ಅಲ್ಲಿಂದ ಒಂದಿಷ್ಟು ಇಲ್ಲಿಂದ ಒಂದಿಷ್ಟು ಅಂತ ಬೇರೆಬೇರೆ ಮೂಲಗಳಿಂದ ಹಣ ಒಟ್ಟು ಮಾಡಬೇಕಾದ ದಿನಗಳು ಕಳೆದುಹೋದವು. ಗ್ರಾಹಕರು ಸುಮ್ಮನೆ ಒಮ್ಮೆ ಕದಂಬದ ಕಾಲ್ ಸೆಂಟರ್ ಅನ್ನು ಸಂಪರ್ಕಿಸಿದರೆ ಅಥವಾ ಯಾವ ಅಂಗಡಿಯಿಂದ ಖರೀದಿ ಮಾಡಬೇಕು ಅಂತಂದುಕೊಂಡಿದ್ದೀರೋ ಆ ಅಂಗಡಿಯ ವ್ಯವಸ್ಥಾಪಕರೊಂದಿಗೆ ಮಾತನಾಡಿ ಚರ್ಚಿಸುವ ಮೂಲಕ ಸುಲಭವಾಗಿ ಈ ಸಾಲ ಸೌಲಭ್ಯವನ್ನು ಪಡೆಯಬಹುದು. ಕದಂಬವು ಸುಲಭ ಮಾಸಿಕ ಕಂತುಗಳ ವ್ಯವಸ್ಥೆ, ಕನಿಷ್ಠ ದಾಖಲೆಪತ್ರಗಳೊಂದಿಗೆ ಮತ್ತು ಯಾವುದೇ ಇತರ ಭದ್ರತೆ ಅಥವಾ ಜಾಮೀನುದಾರರ ಅಗತ್ಯವಿಲ್ಲದಂತೆ ಸಾಲವನ್ನು ಒದಗಿಸುತ್ತದೆ.
  • ಈ ಸಾಲ ಮಂಜೂರಿಗೆ ಅರ್ಹತೆಯನ್ನು ನಿರ್ಧರಿಸುವ ಸಂದರ್ಭದಲ್ಲಿ ಸಾಲ ಪಡೆಯುವವರ ಮರುಪಾವತಿ ಸಾಮರ್ಥ್ಯ (credit worthiness) ಮತ್ತು ವೇತನದ ವಿವರ(Salary Statement)ಗಳನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಪ್ರಸ್ತುತ ಕದಂಬದ ಸೇವೆಗಳು ಆಯ್ದ ನಗರಗಳಿಗೆ ಸೀಮಿತವಾಗಿದ್ದರೂ, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಸಂಸ್ಥೆಯ ಸೇವಾ ವ್ಯಾಪ್ತಿಯನ್ನು ತ್ವರಿತವಾಗಿ ವಿಸ್ತರಿಸಲಾಗುತ್ತಿದೆ.
gold loan banner

ಪ್ರಮುಖ ವೈಶಿಷ್ಟ್ಯಗಳು

  • ಸ್ಪರ್ಧಾತ್ಮಕ ಬಡ್ಡಿದರಗಳು
  • ಕಡಿಮೆ ಬಡ್ಡಿದರಗಳು
  • ಕಡಿಮೆ ಸಂಸ್ಕರಣಾ ಶುಲ್ಕಗಳು
  • ಕನಿಷ್ಠ ಕಾಗದಪತ್ರಗಳ ಅವಶ್ಯಕತೆ
  • ಯಾವುದೇ ಗುಪ್ತ ಶುಲ್ಕಗಳಿಲ್ಲದ ಪಾರದರ್ಶಕವಾದ ದರ ನಿಗದಿ
  • ಭದ್ರತೆ ಅಥವಾ ಜಾಮೀನುದಾರರ ಅಗತ್ಯವಿಲ್ಲ
gold loan banner
kadamba logo