ಕದಂಬ ಸಹಕಾರಿ ಸಂಘವು ಬಂಗಾರದ ಅಡಮಾನ ಸಾಲ ಪಡೆಯುವ ಪ್ರಕ್ರಿಯೆಯಲ್ಲಿ ಆಧುನಿಕ ತಂತ್ರಜ್ಞಾನಗಳ ಮೂಲಕ ಕ್ರಾಂತಿಕಾರಕ ಬದಲಾವಣೆ ತಂದಿದೆ. ಬಂಗಾರದ ಗುಣಮಟ್ಟ ಪರಿಶೀಲನೆ ಮತ್ತು ಮೌಲ್ಯಮಾಪನೆಯಲ್ಲಿ ಅತ್ಯಾಧುನಿಕ ಯಂತ್ರಗಳ ಸಹಾಯದಿಂದ ಸಂಪೂರ್ಣ ಸಾಲ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಲಾಗಿದೆ. ಇದರ ಫಲವಾಗಿ ಪ್ರತಿ ಹಂತವೂ ಸರಳ, ತ್ವರಿತ ಹಾಗೂ ಅಡಚಣೆ ರಹಿತವಾಗಿರುತ್ತದೆ. ಈ ಮೂಲಕ ಸಾಲ ಪಡೆಯುವವರಿಗೆ ಅತ್ಯಂತ ವೇಗ ಮತ್ತು ಸುಗಮ ಸೇವೆ ಒದಗಿಸುವುದು ಸಂಸ್ಥೆಯ ಉದ್ದೇಶ.
ಅರ್ಹತಾ ಮಾನದಂಡ
ಅತ್ಯಲ್ಪ ಮೊತ್ತದಿಂದ ಹಿಡಿದು ದೊಡ್ಡ ಮೊತ್ತದವರೆಗೆ ಸಾಲ ಪಡೆಯುವ ವಿಪುಲ ಆಯ್ಕೆಗಳು
ಸರಳ ಮತ್ತು ಕಡಿಮೆ ದಾಖಲೆ ಪ್ರಕ್ರಿಯೆ
ತ್ವರಿತ ಸಾಲ ಮಂಜೂರು ಮತ್ತು ವಿತರಣಾ ವ್ಯವಸ್ಥೆ
ಗರಿಷ್ಠ ಸಾಲ ಮೊತ್ತ: ರೂ. 20,00,000/- (ರೂಪಾಯಿ ಇಪ್ಪತ್ತು ಲಕ್ಷ ಮಾತ್ರ)